ಕರ್ನಾಟಕ

karnataka

ಖತರ್ನಾಕ್​ ಕಳ್ಳರು ಇವರು: ಜಿಂಕೆ ಮಾಂಸ ಸಾಗಾಟಕ್ಕೆ ಆಂಬ್ಯುಲೆನ್ಸ್ ಬಳಕೆ

ಅಂಬ್ಯುಲೆನ್ಸ್ ನಲ್ಲಿ ಜಿಂಕೆ ಮಾಂಸ ಸಾಗಟ ಮಾಡುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ಡಿಸಿಎಫ್​ಓ ಕಾರ್ಯಾಚರಣೆ ನಡೆಸಿದೆ.

By

Published : May 21, 2020, 2:51 PM IST

Published : May 21, 2020, 2:51 PM IST

Use of ambulances for deer meat  transport
ಜಿಂಕೆ ಮಾಂಸ ಸಾಗಾಟಕ್ಕೆ ಆಂಬ್ಯುಲೆನ್ಸ್ ಬಳಕೆ

ಶಿವಮೊಗ್ಗ: ಇಲ್ಲೊಂದು ಖತರ್ನಾಕ್​ ಗ್ಯಾಂಗ್​ ತನ್ನ ಅಕ್ರಮಕ್ಕೆ ತುರ್ತು ಸೇವೆಗೆ ಸೀಮಿತವಾಗಿರು ಆಂಬ್ಯುಲೆನ್ಸ್​ನ್ನೇ ಬಳಕೆ ಮಾಡಿಕೊಂಡಿದೆ.

ಅಂಬ್ಯುಲೆನ್ಸ್​ನಲ್ಲಿ ಜಿಂಕೆ ಮಾಂಸ ಸಾಗಟ ಮಾಡುವಾಗ ಸಂಚಾರಿ ಅರಣ್ಯ ಇಲಾಖೆ ದಾಳಿ ಮಾಡಿದೆ. ಭದ್ರಾವತಿಯಿಂದ ಶಿವಮೊಗ್ಗದ ಕಡೆ ಹೊರಟಿದ್ದ ಅಂಬ್ಯುಲೆನ್ಸ್ ನಲ್ಲಿ 5 ಕೆ.ಜಿ.ಮಾಂಸ ಪತ್ತೆಯಾಗಿದೆ.

ಅಂಬ್ಯುಲೆನ್ಸ್ ನಲ್ಲಿ ಜಿಂಕೆ ಮಾಂಸ ಸಾಗಟ ಮಾಡುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ಡಿಸಿಎಫ್​ಓ ಕಾರ್ಯಾಚರಣೆ ನಡೆಸಿದೆ. ಹಲವಾರು ದಿನಗಳಿಂದ ಅಂಬ್ಯುಲೆನ್ಸ್​ನಲ್ಲಿ ಮಾಂಸ ಸಾಗಟ ಅಕ್ರಮ ನಡೆಯುತ್ತಿತ್ತು ಎನ್ನಲಾಗಿದೆ. ಅಂಬ್ಯುಲೆನ್ಸ್ ಚಾಲಕ ಸೇರಿ ಇಬ್ಬರು ಇತರೆ ಇಬ್ಬರನ್ನು ಅರಣ್ಯ ಸಂಚಾರಿ ದಳ ವಶಕ್ಕೆ ಪಡೆದುಕೊಂಡಿದೆ.

ABOUT THE AUTHOR

...view details