ಶಿವಮೊಗ್ಗ:ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಅವಾಂತರಕ್ಕೆ ಪೊಲೀಸ್ ಬೈಕ್ ಸೇರಿ ನಗರದ ಎರಡು ಕಡೆ ಕಾರುಗಳು ಗುಂಡಿಗೆ ಬಿದ್ದಿವೆ.
ಸ್ಮಾರ್ಟ್ ಸಿಟಿ ಕಾಮಗಾರಿ ಅವಾಂತರಕ್ಕೆ ಗುಂಡಿಗೆ ಬಿದ್ದ ಬೈಕ್, ಕಾರು - Unscientific Smart city work in Shivamogga
ಅವೈಜ್ಞಾನಿಕವಾಗಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ನಗರಾದ್ಯಂತ ಗುಂಡಿಗಳು ಅಗೆದಿರುವುದರಿಂದ ಪ್ರತಿದಿನ ಬೈಕ್, ಕಾರುಗಳು ಗುಂಡಿಯೊಳಗೆ ಸಿಲುಕಿ ಅವಾಂತರ ಸೃಷ್ಟಿಸುತ್ತಿವೆ.

ಮಲೆನಾಡ ಮಂದಿ ಹೈರಾಣ
ಮಲೆನಾಡ ಮಂದಿ ಹೈರಾಣ
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಮೆಗತಿಯಲ್ಲಿ ಅವೈಜ್ಞಾನಿಕವಾಗಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ದಿನಕ್ಕೊಂದು ಅವಾಂತರಗಳನ್ನು ಸೃಷ್ಟಿಸುತ್ತಿದೆ. ನಗರಾದ್ಯಂತ ಗುಂಡಿಗಳು ಅಗೆದಿರುವುದರಿಂದ ಪ್ರತಿದಿನ ಬೈಕ್, ಕಾರುಗಳು ಗುಂಡಿಯೊಳಗೆ ಸಿಲುಕಿ ವಾಹನ ಸವಾರರಿಗೆ ಹೈರಾಣಾಗಿಸಿವೆ.
ಇಂದು ಸಹ ನಗರದ ಕುವೆಂಪು ರಸ್ತೆಯ ವಾಸನ್ ಐ ಕೇರ್ ಆಸ್ಪತ್ರೆಯ ಎದುರು ಪೊಲೀಸ್ ಬೈಕ್ವೊಂದು ಗುಂಡಿಯೊಳಗೆ ಬಿದ್ದಿದೆ. ನಗರದ ದುರ್ಗಿಗುಡಿಯಲ್ಲಿ ಸಂಜೆ ಗುಂಡಿಯೊಳಗೆ ಕಾರೊಂದು ಸಿಲುಕಿಕೊಂಡಿತ್ತು.