ಶಿವಮೊಗ್ಗ:ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುವ ದುಷ್ಕೃತ್ಯ ಮುಂದುವರೆಸಿದ್ದಾರೆ.
ಶಿವಮೊಗ್ಗದಲ್ಲಿ ಮತ್ತೆ ಆಟೋ, ಬೈಕ್ಗೆ ಬೆಂಕಿ - Shimoga latest news
ಶಿವಮೊಗ್ಗದ ಸಿಗೇಹಟ್ಟೆ ಬಡಾವಣೆಯಲ್ಲಿ ಮತ್ತೆ ಕಿಡಿಗೇಡಿಗಳ ಪುಂಡಾಟ ಮುಂದುವರೆದಿದ್ದು, ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ನಿನ್ನೆ ರಾತ್ರಿ ನಗರದ ಸಿಗೇಹಟ್ಟೆ ಬಡಾವಣೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಆಟೋಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ವಾಹನಗಳು ಸುಟ್ಟು ಹೋಗಿವೆ. ಇವು ಶ್ರೀನಿವಾಸ್ ಮತ್ತು ಕುಬೇರಪ್ಪ ಎಂಬುವವರಿಗೆ ಸೇರಿದವುಗಳಾಗಿವೆ.
ಕಳೆದ ವಾರ ಸಹ ಸಿಗೇಹಟ್ಟಿ ಸೇರಿದಂತೆ ಮಂಡ್ಲಿ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಬೈಕ್ಗಳಿಗೆ ಬೆಂಕಿ ಹಚ್ಚಲಾಗಿತ್ತು. ಈಗ ಮತ್ತೆ ಕೃತ್ಯ ಮುಂದುವರೆಸಿದ್ದು, ಪೊಲೀಸರ ನೈಟ್ ಬೀಟ್ ವೈಫಲ್ಯದಿಂದ ಈ ರೀತಿಯ ಘಟನೆಗಳು ನಡೆಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.