ಶಿವಮೊಗ್ಗ:ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಚಾರ ಮಂಚ್ನಿಂದ ಕೇಂದ್ರ ಕಾರಾಗೃಹದ ಕೈದಿಗಳೊಂದಿಗೆ ಯುಗಾದಿ ಹಬ್ಬ ಆಚರಿಸಲಾಯಿತು.
ಕೈದಿಗಳೊಂದಿಗೆ ಯುಗಾದಿ ಆಚರಿಸಿದ ನರೇಂದ್ರ ಮೋದಿ ವಿಚಾರ ಮಂಚ್ - ಶಿವಮೊಗ್ಗ
ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಚಾರ ಮಂಚ್ ವತಿಯಿಂದ ಕೇಂದ್ರ ಕಾರಾಗೃಹದ ಕೈದಿಗಳೊಂದಿಗೆ ಬೇವು - ಬೆಲ್ಲ ಹಂಚಿ ಯುಗಾದಿ ಹಬ್ಬ ಆಚರಿಸಲಾಯಿತು.
ಕೈದಿಗಳೊಂದಿಗೆ ಯುಗಾದಿ ಹಬ್ಬ ಆಚರಣೆ..
ಹಲವು ಅಪರಾಧ ಪ್ರಕರಣಗಳಲ್ಲಿ ಬಂಧಿಯಾಗಿರುವವರು ತಮ್ಮ ಕುಟುಂಬವನ್ನು ಬಿಟ್ಟು ವರ್ಷಾನುಗಟ್ಟಲೆ ಬಂಧಿಯಾಗಿ, ತಮ್ಮ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುತ್ತಾರೆ. ಇಂಥವರಿಗೆ ಇರುವ ಒಂಟಿತನವನ್ನು ದೂರ ಮಾಡಲು ಅವರೊಂದಿಗೆ ಬೇವು- ಬೆಲ್ಲ ಹಂಚಿ ಯುಗಾದಿ ಹಬ್ಬ ಆಚರಿಸಲಾಯಿತು.
ಈ ವೇಳೆ ನರೇಂದ್ರ ಮೋದಿ ವಿಚಾರ ಮಂಚ್ನ ರಾಜ್ಯಾಧ್ಯಕ್ಷ ಸಂತೋಷ್ ಬಳ್ಳೆಕೆರೆ, ಜಿಲ್ಲಾಧ್ಯಕ್ಷ ಶರತ್ ಕಲ್ಯಾಣಿ ಸೇರಿದಂತೆ ಕಾರಗೃಹದ ಸಹಾಯಕ ಜೈಲರ್ ಶಿವಾನಂದ ಶಿವಪೂರಿ, ಜೈಲರ್ ಅನಿಲ್ ಹಾಗೂ ಜೈಲಿನ ಬಂಧಿಗಳು ಹಾಜರಿದ್ದರು.