ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಅಪ್ರಾಪ್ತೆಗೆ ಮತ್ತು ಬರುವ ಔಷಧ ನೀಡಿ ಅತ್ಯಾಚಾರ, ಇಬ್ಬರ ವಿರುದ್ಧ ಪೋಕ್ಸೊ ಕೇಸ್‌ - ಯುವಕರಿಬ್ಬರು ಅತ್ಯಾಚಾರ

ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋದ ಇಬ್ಬರು ಯುವಕರು ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ.

ಸಾಗರ ಟೌನ್ ಪೊಲೀಸ್ ಠಾಣೆ
ಸಾಗರ ಟೌನ್ ಪೊಲೀಸ್ ಠಾಣೆ

By ETV Bharat Karnataka Team

Published : Aug 22, 2023, 4:43 PM IST

ಶಿವಮೊಗ್ಗ: ಬಾಲಕಿಗೆ ಮತ್ತು ಬರುವ ಔಷಧ ನೀಡಿ ಇಬ್ಬರು ಯುವಕರು ಅತ್ಯಾಚಾರ ಎಸಗಿರುವ ಘಟನೆ ಸಾಗರದಲ್ಲಿ ನಡೆದಿದೆ. ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಗೆಳೆಯರೇ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರವಾಸದ ನೆಪ: ಆರೋಪಿಗಳನ್ನು ಶಾಬಾಸ್ (26) ಹಾಗೂ ಅಜಯ್ (32) ಎಂದು ಗುರುತಿಸಲಾಗಿದೆ. ಈ ಇಬ್ಬರು ಯುವಕನಿಗೆ ಪರಿಚಯಸ್ಥರಾಗಿದ್ದರು. ಬಾಲಕಿಯನ್ನು ಪುಸಲಾಯಿಸಿ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧ ಬೆರೆಸಿ, ಅತ್ಯಾಚಾರ ನಡೆಸಿದ್ದಾರೆ. ಆಗಸ್ಟ್ 19 ರಂದು ಘಟನೆ ನಡೆದಿದೆ. ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಆರೋಪಿಗಳು ನಾಪತ್ತೆಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಅಪ್ತಾಪ್ತೆ ಮೇಲೆ ಬೇರೆ ಬೇರೆ ಸಂದರ್ಭಗಳಲ್ಲಿ ಯುವಕರು ಲೈಂಗಿಕ ದೌರ್ಜನ್ಯ ಎಸಗಿದ ಕುರಿತು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೋಕ್ಸೊ ಪ್ರಕರಣ (ಜುಲೈ 31-2023) ದಾಖಲಾಗಿತ್ತು. ಪರಿಶಿಷ್ಟ ಪಂಗಡಕ್ಕೆ ಸೇರಿದ 16 ವರ್ಷದ ಬಾಲಕಿಯ ಮೇಲೆ ಕೇರಳದ ಯುವಕರು ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳು ಬಾಲಕಿಗೆ ಆಮಿಷಗಳನ್ನು ಒಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಾಲಕಿ ಮನೆಗೆ ಬರುವಾಗ ತಡವಾದ ಕುರಿತು ವಿಚಾರಿಸಿದಾಗ ವಿಚಾರ ತಿಳಿಸಿದ್ದಳು. ಐವರು ಆರೋಪಿಗಳು ಕೆಲವು ವರ್ಷಗಳಿಂದಲೂ ದುಷ್ಕೃತ್ಯ ನಡೆಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಸ್‌ನಲ್ಲಿ ಯುವತಿಗೆ ಕಿರುಕುಳ : ಯುವತಿಯೊಂದಿಗೆ ಬಸ್‌ನಲ್ಲಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಗ್ರಾ.ಪಂ ಸದಸ್ಯನನ್ನು ಹಿಡಿದು ಯುವಕರು ಪೊಲೀಸರಿಗೊಪ್ಪಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಜುಲೈ 29ರ ಸಂಜೆ ನಡೆದಿತ್ತು. ಯುವತಿ ಮಂಗಳೂರಿನಿಂದ ತನ್ನೂರು ಮೂಡಿಗೆರೆಗೆ ಕೆಎಎಸ್ಆರ್​ಟಿಸಿ ಬಸ್‌ನಲ್ಲಿ ಬರುತಿದ್ದಳು. ಯುವತಿಯ ಪಕ್ಕದಲ್ಲೇ ಬಂದು ಕುಳಿತ ಮಿತ್ತಬಾಗಿಲಿನ ಗ್ರಾ. ಪಂ ಸದಸ್ಯ ಕಬೀರ್ ಎಂಬಾತ ಬಸ್ ಮಡಂತ್ಯಾರು ಸಮೀಪ ಬರುತ್ತಿದ್ದಂತೆ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿ ವಿರೋಧ ವ್ಯಕ್ತಪಡಿಸಿದರೂ ಚಾಳಿ ಮುಂದುವರಿಸಿದ್ದ. ನೊಂದ ಯುವತಿ ತಂದೆ ಹಾಗೂ ಉಜಿರೆಯ ತನ್ನ ಪರಿಚಯಸ್ಥ ಯುವಕರಿಗೆ ವಿಷಯ ತಿಳಿಸಿದ್ದಳು. ಬಸ್ ಉಜಿರೆಗೆ ಬರುತ್ತಿದ್ದಂತೆ ಯುವಕರು ಆರೋಪಿಯನ್ನು ಬಸ್‌ನಿಂದಿಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಯುವತಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ.

ಇದನ್ನೂ ಓದಿ:POCSO case: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗಳ ವಿರುದ್ಧ ವಿಟ್ಲ ಠಾಣೆಯಲ್ಲಿ ಪೋಕ್ಸೊ ಕೇಸು ದಾಖಲು

ABOUT THE AUTHOR

...view details