ಕರ್ನಾಟಕ

karnataka

ETV Bharat / state

ಶಿವಮೊಗ್ಗ: ವಿದ್ಯುತ್ ತಂತಿ ತಗುಲಿ ಇಬ್ಬರು ಕಟ್ಟಡ ಕಾರ್ಮಿಕರು ಸಾವು - Two workers died after electric Shock

ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ವಿದ್ಯುತ್​ ತಗುಲಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

two-workers-died-after-electric-shock-in-shivamogga
ಶಿವಮೊಗ್ಗ : ವಿದ್ಯುತ್ ತಂತಿ ತಗುಲಿ ಇಬ್ಬರು ಕಟ್ಟಡ ಕಾರ್ಮಿಕರು ಸಾವು

By

Published : Jun 28, 2023, 3:39 PM IST

ಶಿವಮೊಗ್ಗ : ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ವಿದ್ಯುತ್ ತಗಲಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ನಗರದ ಬೈಪಾಸ್ ರಸ್ತೆಯಲ್ಲಿನ ಕಟ್ಟಡದಲ್ಲಿ ಇಂದು ನಡೆದಿದೆ. ಮೃತರಲ್ಲಿ ಓರ್ವನನ್ನು ಆಂಧ್ರ ಪ್ರದೇಶ ಮೂಲದ ನಿವಾಸಿ ಚೆಲ್ಲಾ ಸೋಮಶೇಖರ್ (55) ಎಂದು ಗುರುತಿಸಲಾಗಿದ್ದು, ಮತ್ತೋರ್ವನ ಗುರುತು ಪತ್ತೆಯಾಗಿಲ್ಲ.

ಬೈಪಾಸ್​ನ ಊರುಗಡೂರಿನ ಡಾ. ಅಂಬೇಡ್ಕರ್ ಭವನದ ಎದುರು ಗಂಗಾಧರ್ ಎಂಬವರಿಗೆ ಸೇರಿದ ನಿರ್ಮಾಣ ಹಂತದಲ್ಲಿರುವ ಕಮರ್ಷಿಯಲ್ ಕಟ್ಟಡದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ 10.30ರ ಸುಮಾರಿಗೆ ಎರಡು ತಗಡುಗಳನ್ನು ಕಟ್ಟಡದ ಕೆಳಗಿನಿಂದ ಮೇಲೆತ್ತಿಕೊಂಡು ಹೋಗುವ ಸಂದರ್ಭದಲ್ಲಿ ತಗಡು ವಿದ್ಯುತ್ ತಂತಿ ಸ್ಪರ್ಶಿಸಿದೆ. ತಗಡು ತಗುಲಿದ ಕೂಡಲೇ
ಇಬ್ಬರಿಗೂ ಶಾಕ್ ಹೊಡೆದಿದೆ. ತಕ್ಷಣ ಸ್ಥಳೀಯರು ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :WhatsApp Pink scam: ಎಚ್ಚರ; ವಾಟ್ಸ್​ಆ್ಯಪ್ ಪಿಂಕ್ ಇನ್​ಸ್ಟಾಲ್ ಮಾಡಿದ್ರೆ ಈಗಲೇ ಅನ್​ - ಇನ್​ಸ್ಟಾಲ್ ಮಾಡಿ!

ಬಂಟ್ವಾಳದಲ್ಲಿ ವಿದ್ಯುತ್​ ಶಾಕ್​ಗೆ ವ್ಯಕ್ತಿ ವ್ಯಕ್ತಿ :ಮರದಿಂದಅಡಿಕೆ ಕೊಯ್ಯುವಾಗ ವಿದ್ಯುತ್ ಶಾಕ್ ತಗುಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಲಾಯಿಬೆಟ್ಟು ಎಂಬಲ್ಲಿ ನಡೆದಿತ್ತು. ಮೃತರನ್ನು ಬೋಳಿಯಾರು ಗ್ರಾಮದ ನಿವಾಸಿ ಇಬ್ರಾಹಿಂ ಎಂಬುವರ ಪುತ್ರ ಶಾಫಿ (28) ಎಂದು ಗುರುತಿಸಲಾಗಿತ್ತು. ಸಜೀಪಮುನ್ನೂರು ಗ್ರಾಮದ ಮೂಸಬ್ಬ ಎಂಬುವರ ತೋಟದಲ್ಲಿ ದುರ್ಘಟನೆ ನಡೆದಿತ್ತು.

ಮೃತ ಶಾಫಿ ಕಳೆದ ಹಲವು ವರ್ಷಗಳಿಂದ ಅಡಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಈ ವರ್ಷ ಅಡಿಕೆ ಕೀಳಲು ಸಾವಿರಾರು ರೂ. ನೀಡಿ ಹೊಸ ಸಲಾಕೆ ಖರೀದಿಸಿದ್ದರು. ಹೊಸ ಸಲಾಕೆಯಲ್ಲಿ ಮಲಾಯಿಬೆಟ್ಟುವಿನ ತೋಟದಲ್ಲಿ ಅಡಿಕೆ ಕೀಳುವ ವೇಳೆ ಶಾಫಿ ಅವರ ಕೈಯಿಂದ ನಿಯಂತ್ರಣ ತಪ್ಪಿದ ಸಲಾಕೆ ರಸ್ತೆಯ ಬದಿಯಲ್ಲಿ ಹಾದು ಹೋಗಿದ್ದ ವಿದ್ಯುತ್​ ತಂತಿಗೆ ​ತಗುಲಿದೆ. ಪೈಬರ್ ಸಲಾಕೆಯಲ್ಲಿ ಅಡಕೆ ಕೀಳಲು ಅಳವಡಿಸಿದ ಕಬ್ಬಿಣದ ಕತ್ತಿಯ ಮೂಲಕ ವಿದ್ಯುತ್ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸ್ಥಳಕ್ಕೆ ಸಜೀಪಮುನ್ನೂರು ಗ್ರಾಮಕರಣಿಕೆ ಸ್ವಾತಿ, ಮೆಸ್ಕಾಂನ ಅಧಿಕಾರಿಗಳು ಹಾಗೂ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ :District Court: ಪತ್ನಿ ಹಂತಕನಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ ನ್ಯಾಯಾಲಯ

ABOUT THE AUTHOR

...view details