ಕರ್ನಾಟಕ

karnataka

ETV Bharat / state

ಮನೆಗಳ್ಳರಿಬ್ಬರ ಬಂಧನ: 2.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ - ಮನೆ ಕಳ್ಳತನ

ಹೊಳೆಹೊನ್ನೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಇಬ್ಬರು ಮನೆಗಳ್ಳರನ್ನು ಬಂಧಿಸಿದ್ದು, 2.30 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

Arrest
Arrest

By

Published : Oct 24, 2020, 12:32 PM IST

ಶಿವಮೊಗ್ಗ: ಮನೆಗಳ್ಳರಿಬ್ಬರನ್ನು ಬಂಧಿಸಿ, 2.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಹೊಳೆಹೊನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಆಗರದಹಳ್ಳಿ ಗ್ರಾಮದ ಶಶಿ (26) ಹಾಗೂ ದೊಡ್ಡೇರಿ ಗ್ರಾಮದ ರವಿ (29) ಬಂಧಿತ ಆರೋಪಿಗಳು. ಭದ್ರಾವತಿ ತಾಲೂಕು ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 56 ಗ್ರಾಂ ತೂಕದ ಚಿನ್ನಾಭರಣ, 140 ಗ್ರಾಂ ತೂಕದ ಬೆಳ್ಳಿ‌‌ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಹಾಗೂ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details