ಕರ್ನಾಟಕ

karnataka

ETV Bharat / state

ಸಾಗರ ಗ್ರಾಮಾಂತರ ಪೊಲೀಸರ ಭರ್ಜರಿ ಬೇಟೆ: 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ - ಸಾಗರ ಗ್ರಾಮಾಂತರ ಪೋಲೀಸರು

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸಾಗರ ಗ್ರಾಮಾಂತರ ಪೋಲೀಸರು ಬಂಧಿಸಿ, ಆರೋಪಿಗಳಿಂದ 137 ಗ್ರಾಂ ತೂಕದ ಬಂಗಾರ, 2 ಕೆಜಿ 700 ಗ್ರಾಂ ಬೆಳ್ಳಿ ಆಭರಣ ಸೇರಿ ಒಟ್ಟು 5,35,200 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

thefts arrest
ಕಳ್ಳರ ಬಂಧನ

By

Published : Nov 28, 2019, 9:18 PM IST

ಶಿವಮೊಗ್ಗ: ಸಾಗರ ಗ್ರಾಮಾಂತರ ಭಾಗದಲ್ಲಿ ಹಲವು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸಾಗರ ಗ್ರಾಮಾಂತರ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಸಾಗರ ತಾಲೂಕು ಕೆರೆಕೊಪ್ಪದ ಅನಂತಮೂರ್ತಿ(38) ಮತ್ತು ದೇವೇಂದ್ರ(36) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಬಳಸಗೋಡು ಸಮೀಪ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳರ ಕೃತ್ಯ ಬಯಲಾಗಿದೆ. ವಿಚಾರಣೆ ವೇಳೆ 9 ಕಳ್ಳತನ ಪ್ರಕರಣ ಬಯಲಿಗೆ ಬಂದಿವೆ.

ಆರೋಪಿಗಳಿಂದ 137 ಗ್ರಾಂ ತೂಕದ ಬಂಗಾರ, 2 ಕೆಜಿ 700 ಗ್ರಾಂ ಬೆಳ್ಳಿ ಆಭರಣ ಸೇರಿ ಒಟ್ಟು 5,35,200 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇತ್ತೀಚಿಗೆ ಸಾಗರ ಗ್ರಾಮಾಂತರ ಭಾಗದಲ್ಲಿ ಕಳ್ಳತನ ಹೆಚ್ಚಾಗಿ ನಡೆಯುತ್ತಿತ್ತು. ಇದು ಪೊಲೀಸ್ ಇಲಾಖೆಗೆ ತೀವ್ರ ತಲೆನೋವಾಗಿ ಪರಿಣಮಿಸಿತ್ತು. ಕಳ್ಳರನ್ನು ಹಿಡಿದು ಬಂಧಿಸಲು ಇಲಾಖೆ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿತ್ತು.

ಕಾರ್ಯಾಚರಣೆಯಲ್ಲಿ ಸಾಗರ ಗ್ರಾಮಾಂತರ ವೃತ್ತ ನಿರೀಕ್ಷಕ ಸುನಿಲ್ ಕುಮಾರ್, ಪಿಎಸ್ಐ ಭರತ್ ಕುಮಾರ್ ಹಾಗೂ ಸುಜಾತ ಸಿ., ಅಪರಾಧ ವಿಭಾಗದ ಫೈರೋಜ್ ಅಹಮದ್, ಪರಶುರಾಮ, ಸನಾವುಲ್ಲಾ, ಸಂದೀಪ, ಚಂದ್ರಕಾಂತ, ಗಿರೀಶ್, ಶಿವನಗೌಡ, ಲಕ್ಷ್ಮಣ ಇದ್ದರು. ಕಳ್ಳರನ್ನು ಬಂಧಿಸಿದಕ್ಕೆ ಎಸ್ಪಿ ಶಾಂತರಾಜು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ABOUT THE AUTHOR

...view details