ಶಿವಮೊಗ್ಗ: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಮಾಂಗಲ್ಯ ಸರ ಅಪಹರಣ ಮಾಡುತ್ತಿದ್ದ ಇಬ್ಬರನ್ನು ಸಾಗರ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಮಾಂಗಲ್ಯ ಸರ ಎಗರಿಸುತ್ತಿದ್ದ ಇಬ್ಬರು ಕಳ್ಳರ ಬಂಧನ - kannada news paper, news kannada, etv bhart, Two robbers, arrested, Shimoga, ಕಳ್ಳರ ಬಂಧನ,
ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಮಾಂಗಲ್ಯ ಸರ ಅಪಹರಣ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಸಾಗರ ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
![ಮಾಂಗಲ್ಯ ಸರ ಎಗರಿಸುತ್ತಿದ್ದ ಇಬ್ಬರು ಕಳ್ಳರ ಬಂಧನ](https://etvbharatimages.akamaized.net/etvbharat/images/768-512-2917914-thumbnail-3x2-thftjpg.jpg)
ಕಳ್ಳರ ಬಂಧನ
ಕಳ್ಳರ ಬಂಧನ
ಬಂಧಿತರು ಸಾಗರ ತಾಲೂಕಿನ ಸೂರನಗದ್ದೆ ಗ್ರಾಮದ ರಮೇಶ್ ಹಾಗೂ ಸಂದೀಪ್. ಇವರಿಬ್ಬರು ಸಾಗರದ ಅಣಲೇಕೊಪ್ಪ ವಾಣಿಜ್ಯ ಕಚೇರಿ ಬಳಿ ಅನುಮಾನಾಸ್ಪದವಾಗಿ ಬೈಕ್ನಲ್ಲಿ ಓಡಾಡುವಾಗ ತಡೆದು ವಿಚಾರಣೆ ನಡೆಸಿದಾಗ ಕಳ್ಳರು ಸಾಗರದ ವಿವಿದೆಡೆ ನಡೆಸಿದ ಕೃತ್ಯ ಬಾಯ್ಬಿಟ್ಟಿದ್ದಾರೆ.
ಬಂಧಿತರಿಂದ 10 ಲಕ್ಷ ಮೌಲ್ಯದ 320 ಗ್ರಾಂ ತೂಕದ 8 ಮಾಂಗಲ್ಯ ಸರ ಹಾಗೂ ಎರಡು ಬೈಕ್ ವಶ ಪಡಿಸಿಕೊಳ್ಳಲಾಗಿದೆ. ಸಾಗರದ ಡಿವೈಎಸ್ಪಿ ಯತೀಶ್ರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
TAGGED:
ಶಿವಮೊಗ್ಗ,ಸಾಗರ ಪೇಟೆ ಪೊಲೀಸರು,