ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನಿನ್ನೆ ಮತ್ತೆರೆಡು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 109ಕ್ಕೆ ಏರಿಕೆಯಾಗಿದೆ.
ತೀರ್ಥಹಳ್ಳಿ ತಾಲೂಕು ಕೋಣಂದೂರು ಬಳಿಯ ಗ್ರಾಮದ ವ್ಯಕ್ತಿಯಲ್ಲಿ ಪಾಸಿಟಿವ್ ಕಂಡು ಬಂದಿದೆ. P-8494 ರೋಗಿ ಗುಜರಾತ್ನ ವಡೋದರದಿಂದ ಜಿಲ್ಲೆಗೆ ಆಗಮಿಸಿದ್ದರು. ಶಿವಮೊಗ್ಗದ ತಮ್ಮ ಸಂಬಂಧಿಕರ ಮನೆಯಲ್ಲಿ ಕ್ವಾರಂಟೈನ್ ಆಗಿ ತಮ್ಮ ಊರಿಗೆ ವಾಪಸ್ ಆಗಿದ್ದರು. ಕ್ವಾರಂಟೈನ್ ಮುಗಿಸಿ ಊರಿಗೆ ಬಂದ ಮೇಲೆ ಪಾಸಿಟಿವ್ ಕಂಡು ಬಂದಿದೆ. ತಕ್ಷಣ ಇವರನ್ನು ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
P-8494ರೋಗಿಯ ಮನೆ ಹಾಗೂ ಪ್ರಾಥಮಿಕ ಸಂಪರ್ಕದಲ್ಲಿದ್ದ 13 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಯಲ್ಲಿ P-8493 ರೋಗಿಗೆ ಯಾರ ಸಂಪರ್ಕದಿಂದ ಪಾಸಿಟಿವ್ ಬಂದಿದೆ ಎಂಬುದು ತಿಳಿದಿಲ್ಲ. ಇವರು ಕಬ್ಬಿನ ವ್ಯಾಪಾರಿಯಾಗಿದ್ದು, ಉಡುಪಿಗೆ ವ್ಯಾಪಾರಕ್ಕೆಂದು ಹೋಗಿ ಬರುತ್ತಿದ್ದರು. ಜ್ವರ, ಕೆಮ್ಮು, ಶೀತ ಎಂದು ತೀರ್ಥಹಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಂಡಿದ್ದರು. ತದನಂತರ ಶಿವಮೊಗ್ಗಕ್ಕೆ ಬಂದು ಸ್ವಾಬ್ ನೀಡಿ ಊರಿಗೆ ವಾಪಸ್ ಆಗಿದ್ದರು. ಇದರಿಂದ ಇವರು ವಾಸವಾಗಿದ್ದ ಪಾಶೆಟ್ಟಿಕೊಪ್ಪ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.
ಟ್ರಾವೆಲ್ ಹಿಸ್ಟರಿ ಇಲ್ಲದ ಪ್ರಕರಣಗಳು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 109 ಕ್ಕೆ ಏರಿಕೆಯಾಗಿದೆ. ಇಂದು 17 ಜನ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಲ್ಲಿ 23 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.