ಶಿವಮೊಗ್ಗ :ನಗರದಲ್ಲಿ ಕರ್ತವ್ಯ ಲೋಪ ಎಸಗಿದ ಇಬ್ಬರು ಪೊಲೀಸ್ ಪೇದೆಗಳನ್ನು ಎಸ್ಪಿ ಶಾಂತರಾಜು ಅಮಾನತು ಮಾಡಿದ್ದಾರೆ.
ಅಕ್ರಮ ಮದ್ಯ ಸೀಜ್ ಮಾಡಿ ತಮ್ಮ ಬಳಿಯೇ ಇಟ್ಕೊಂಡಿದ್ದ ಇಬ್ಬರು ಪೊಲೀಸ್ ಪೇದೆ ಸಸ್ಪೆಂಡ್ - ಎಸ್ಪಿ ಶಾಂತರಾಜು ಶಿವಮೊಗ್ಗ
ಇವರಿಬ್ಬರು ಅಕ್ರಮ ಮದ್ಯ ಮಾರಾಟಕ್ಕೆ ಯತ್ನ ಮಾಡುತ್ತಿದ್ದ ಓರ್ವನನ್ನು ಹಿಡಿದು ಆತನಿಂದ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದರು. ಆದರೆ, ಈ ಕುರಿತು ಪ್ರಕರಣ ದಾಖಲು ಮಾಡದೆ ತಮ್ಮ ಬಳಿಯೇ ಮದ್ಯ ಇಟ್ಟುಕೊಂಡಿದ್ದರು.
ಕೋಟೆ ಪೊಲೀಸ್ ಠಾಣೆಯ ಚಂದ್ರನಾಯ್ಕ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ವಸಂತ ಎಂಬುವರನ್ನು ಅಮಾನತು ಮಾಡಲಾಗಿದೆ. ಇವರಿಬ್ಬರನ್ನು ಪ್ರಕರಣವೊಂದಕ್ಕೆ ಡಿಸಿಐಬಿ ವಿಭಾಗಕ್ಕೆ ಕಳುಹಿಸಲಾಗಿತ್ತು. ಇವರಿಬ್ಬರು ಅಕ್ರಮ ಮದ್ಯ ಮಾರಾಟಕ್ಕೆ ಯತ್ನ ಮಾಡುತ್ತಿದ್ದ ಓರ್ವನನ್ನು ಹಿಡಿದು ಆತನಿಂದ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದರು. ಆದರೆ, ಈ ಕುರಿತು ಪ್ರಕರಣ ದಾಖಲು ಮಾಡದೆ ತಮ್ಮ ಬಳಿಯೇ ಮದ್ಯ ಇಟ್ಟುಕೊಂಡಿದ್ದರು.
ಈ ಬಗ್ಗೆ ತಿಳಿದ ಎಸ್ಪಿ ವಿಚಾರಣೆ ನಡೆಸಿದಾಗ ಪ್ರಕರಣದ ಬಗ್ಗೆ ಇಬ್ಬರು ಪೇದೆಗಳು ತಪ್ಪೊಪ್ಪಿಕೊಂಡಿದ್ದಾರೆ. ಮದ್ಯವನ್ನು ವಾಪಸ್ ಮಾಡಿಸಿ ಇಬ್ಬರು ಪೇದೆಯನ್ನು ಎಸ್ಪಿ ಶಾಂತರಾಜು ಅಮಾನತು ಮಾಡಿ ಈ ಮೂಲಕ ತಮ್ಮ ಇಲಾಖೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.