ಶಿವಮೊಗ್ಗ:ಜೋಳದ ಹೊಲದಲ್ಲಿ ಹಾಕಿದ್ದ ಐಬಕ್ಸ್ ವಿದ್ಯುತ್ ತಂತಿ ತಗುಲಿ ಎರಡು ಕಾಡಾನೆಗಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ಚನ್ನಹಳ್ಳಿಯ ಆನೆಸರದಲ್ಲಿ ನಡೆದಿದೆ.
ಚನ್ನಹಳ್ಳಿಯ ಚಂದ್ರನಾಯ್ಕ ಎಂಬುವರು ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದ ಜೋಳದ ಹೊಲಕ್ಕೆ ಐಬಕ್ಸ್ ವಿದ್ಯುತ್ ಸಂಪರ್ಕ ನೀಡಿದ್ದರು. ಇವರ ಜಮೀನು ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಹೊಂದಿಕೊಂಡಿದ್ದರಿಂದ ವಿದ್ಯುತ್ ತಂತಿ ತಗುಲಿ ಎರಡು ಕಾಡಾನೆಗಳು ಸಾವನ್ನಪ್ಪಿವೆ. ಸುಮಾರು 12 ವರ್ಷದ ಎರಡು ಕಾಡಾನೆಗಳು ಎಂದು ತಿಳಿದುಬಂದಿದೆ. ಈ ಕಾಡಾನೆಗಳು ಭದ್ರಾ ಅರಣ್ಯದಿಂದ ವಲಸೆ ಬಂದಿದ್ದವು ಎಂದು ಹೇಳಲಾಗ್ತಿದೆ.