ಶಿವಮೊಗ್ಗ:ಭದ್ರಾವತಿಯ ಯುಜಿಡಿ ಶುದ್ಧೀಕರಣ ಘಟಕದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಹಾಗೂ ಪುರುಷನ ಶವ ಪತ್ತೆಯಾಗಿದೆ.
ಭದ್ರಾವತಿಯ ಹೊಸ ಸೇತುವೆ ಬಳಿ ಇರುವ ಸಿದ್ದಾರೂಢ ಬಡಾವಣೆಯ ಶೃಂಗೇರಿ ಶಂಕರಮಠದ ಬಳಿಯಲ್ಲಿ ಯುಜಿಡಿ ಘಟಕದಲ್ಲಿ ಎರಡು ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದರಲ್ಲಿ ಮಹಿಳೆಯ ಗುರುತು ಪತ್ತೆಯಾಗಿದ್ದು, ಭದ್ರಾವತಿಯ ಹಳೆನಗರದ ನಿವಾಸಿ, ಭಾಗ್ಯಮ್ಮ(40) ಎಂದು ಗುರುತಿಸಲಾಗಿದೆ. ಪುರುಷ ಶವದ ಗುರುತು ಪತ್ತೆಯಾಗಿಲ್ಲ. ಇಬ್ಬರನ್ನು ಕೊಲೆ ಮಾಡಿ ಯುಜಿಡಿ ಘಟಕದಲ್ಲಿ ಬಿಸಾಡಿರಬಹುದು ಎನ್ನಲಾಗಿದೆ.