ಕರ್ನಾಟಕ

karnataka

ETV Bharat / state

ಶಿಕಾರಿಪುರ ಪುರಸಭೆ ಕಾಂಗ್ರೆಸ್ ಸದಸ್ಯರ ರಾಜೀನಾಮೆ: ಬಿಜೆಪಿ ಸೇರ್ಪಡೆ - B y Raghavendra news

ಕಳೆದ ವರ್ಷ ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಕಾಂಗ್ರೆಸ್​ನ ರಮೇಶ್ ಹಾಗೂ ಶ್ರೀಮತಿ ಉಮಾವತಿ ಅವರು ಇಂದು ಅಧಿಕೃತವಾಗಿ ಶಿಕಾರಿಪುರದ ಬಿಜೆಪಿ‌ ಕಚೇರಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Shikaripura
Shikaripura

By

Published : Jul 23, 2020, 4:10 PM IST

ಶಿವಮೊಗ್ಗ: ಶಿಕಾರಿಪುರದಲ್ಲಿ ಕಾಂಗ್ರೆಸ್​​ನ ಇಬ್ಬರು ಪುರಸಭೆಯ ಸದಸ್ಯರು ಕಾಂಗ್ರೆಸ್​​ಗೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಕಳೆದ ವರ್ಷ ಪುರಸಭೆಗೆ ಚುನಾವಣೆ ನಡೆದು ಆಯ್ಕೆಯಾಗಿದ್ದ ರಮೇಶ್ ಹಾಗೂ ಶ್ರೀಮತಿ ಉಮಾವತಿ ಅವರು ಮಾರ್ಚ್​ನಲ್ಲಿಯೇ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. ಅದು ಅಂಗೀಕಾರ ಸಹ ಅಗಿತ್ತು. ಇದೀಗ ಅಧಿಕೃತವಾಗಿ ಶಿಕಾರಿಪುರದ ಬಿಜೆಪಿ‌ ಕಚೇರಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರರವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಅಲ್ಲದೇ ಪುರಸಭೆಗೆ ಆಯ್ಕೆಯಾಗಿದ್ದ ಮೂವರು ಪಕ್ಷೇತರ ಸದಸ್ಯರಾದ ಪ್ರಶಾಂತ್, ಸಾದಿಕ್ ಹಾಗೂ ರೇಖಾಬಾಯಿ ಅವರು ಸಹ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಶಿಕಾರಿಪುರ ಪುರಸಭೆಯಲ್ಲಿ 23 ಸ್ಥಾನಗಳಿದ್ದು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 12, ಬಿಜೆಪಿ‌ 8 ಹಾಗೂ ಪಕ್ಷೇತರರು‌ 3 ಸ್ಥಾನಗಳಿಸಿದ್ದರು.

ಈಗ ಕಾಂಗ್ರೆಸ್ ನ ಇಬ್ಬರು ಹಾಗೂ ಮೂವರು ಪಕ್ಷೇತರರು ಬಿಜೆಪಿಗೆ ಸೇರ್ಪಡೆಯಾದ ನಂತರ ಬಿಜೆಪಿಗೆ ಬಹುಮತ ಲಭ್ಯವಾಗುವ ಎಲ್ಲಾ‌ ಲಕ್ಷಣಗಳು ಗೋಚರಿಸುತ್ತಿವೆ.

ABOUT THE AUTHOR

...view details