ಶಿವಮೊಗ್ಗ:ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸೊರಬ ತಾಲೂಕಿನ ಉದ್ರಿ ಗ್ರಾಮದಲ್ಲಿ ನಡೆದಿದೆ.
ಸೊರಬ ಬಳಿ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ದುರ್ಮರಣ - ನೀರಿನಲ್ಲಿ ಮುಳುಗಿ
ಸೊರಬ ತಾಲೂಕಿ ಉದ್ರಿ ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕರಿಬ್ಬರು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
![ಸೊರಬ ಬಳಿ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ದುರ್ಮರಣ](https://etvbharatimages.akamaized.net/etvbharat/prod-images/768-512-4448206-thumbnail-3x2-smg.jpg)
ಬಾಲಕರ ಸಾವು
ಕಾರ್ತಿಕ್ (16) ಹಾಗೂ ವಿನಾಯಕ್(16) ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಬಾಲಕರು. ಉದ್ರಿ ಗ್ರಾಮದ ಕೆರೆಗೆ ಈಜಲು ಹೋಗಿದ್ದ ಇಬ್ಬರಲ್ಲಿ ಕಾರ್ತಿಕ್ ಮೊದಲು ನೀರಿನಲ್ಲಿ ಮುಳುಗಿದ್ದ. ಕಾರ್ತಿಕ್ನನ್ನು ರಕ್ಷಿಸಲು ಹೋಗಿ ವಿನಾಯಕ್ ಸಹ ಸಾವನ್ನಪ್ಪಿದ್ದಾನೆ.
ಇನ್ನು, ದಡದಲ್ಲಿ ಇದ್ದವರು ಕೂಗಿಕೊಂಡಾಗ ಗ್ರಾಮಸ್ಥರು ಬಂದು ಕಾಪಾಡುವಷ್ಟರಲ್ಲಿ ಬಾಲಕರಿಬ್ಬರ ಪ್ರಾಣ ಹಾರಿಹೋಗಿತ್ತು.ಸೊರಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.