ಕರ್ನಾಟಕ

karnataka

ರಾಮ ಮಂದಿರದ ಶಿಲಾನ್ಯಾಸಕ್ಕೆ ತುಂಗಾ-ಭದ್ರಾ ನದಿ ನೀರು ಸಂಗ್ರಹ..

By

Published : Jul 22, 2020, 12:39 PM IST

ರಾಮ ಮಂದಿರ ಭೂಮಿ ಪೂಜೆ ವೇಳೆ ದೇಶದ ಎಲ್ಲ ಪವಿತ್ರ ನದಿಗಳ ನೀರನ್ನು ಬಳಸಲು ಯೋಜಿಸಲಾಗಿದೆ. ಹಾಗಾಗಿ ಶಿವಮೊಗ್ಗ ಜಿಲ್ಲೆಯ ತುಂಗಾ-ಭದ್ರಾ ನದಿಗಳ ನೀರನ್ನು ಸಂಗ್ರಹಿಸಿ ಅಯೋಧ್ಯೆಗೆ ಕಳುಹಿಸಲಾಗಿದೆ.

Tunga-Bhadra River Water to Ram Mandir
ರಾಮ ಮಂದಿರದ ಶಿಲಾನ್ಯಾಸಕ್ಕೆ ತುಂಗಾ-ಭದ್ರಾ ನದಿ ನೀರು..

ಶಿವಮೊಗ್ಗ:ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಆಗಸ್ಟ್ 5 ರಂದು ಅಡಿಗಲ್ಲು ಸಮಾರಂಭ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭೂಮಿ ಪೂಜೆ ವೇಳೆ ತುಂಗಾ ಮತ್ತು ಭದ್ರಾ ನದಿಯ ನೀರನ್ನು ಸಂಗ್ರಹಿಸಿ ಶಿವಮೊಗ್ಗದಿಂದ ಅಯೋಧ್ಯೆಗೆ ಕಳುಹಿಸಿಕೊಡಲಾಗಿದೆ.

ರಾಮ ಮಂದಿರದ ಶಿಲಾನ್ಯಾಸಕ್ಕೆ ತುಂಗಾ-ಭದ್ರಾ ನದಿ ನೀರು..

ಎರಡು ನದಿಗಳ ಪವಿತ್ರ ನೀರನ್ನು ಸಂಗ್ರಹಿಸಿ ತರಲಾಗಿದ್ದು, ವಿಶ್ವ ಹಿಂದೂ ಪರಿಷತ್ ವತಿಯಿಂದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಮುಖರ ಸಮ್ಮುಖದಲ್ಲಿ ನದಿಯ ನೀರನ್ನು ವಿಶೇಷವಾಗಿ ಪ್ಯಾಕ್ ಮಾಡಿ ಅಯೋಧ್ಯೆಗೆ ಕಳುಹಿಸಲಾಗಿದೆ.

ಭೂಮಿ ಪೂಜೆ ವೇಳೆ ದೇಶದ ಎಲ್ಲ ಪವಿತ್ರ ನದಿಗಳ ನೀರನ್ನು ಬಳಸಲು ಯೋಜಿಸಲಾಗಿದೆ. ಹಾಗಾಗಿ ಶಿವಮೊಗ್ಗ ಜಿಲ್ಲೆಯ ಈ ಎರಡು ಪವಿತ್ರ ನದಿಗಳ ನೀರನ್ನು ಅಯೋಧ್ಯೆಗೆ ಕಳುಹಿಸಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ರಮೇಶ್ ಬಾಬು ತಿಳಿಸಿದ್ದಾರೆ.

ABOUT THE AUTHOR

...view details