ಶಿವಮೊಗ್ಗ: ಜಿಲ್ಲಾ ಕುಂಚ ಕಲಾವಿದರ ಸಂಘದ ಕಲಾವಿದರು ಕೊರೊನಾ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಗಳಾದ ಪೊಲೀಸ್, ವೈದ್ಯಕೀಯ ಸಿಬ್ಬಂದಿ, ಪತ್ರಕರ್ತರು, ಪೌರಕಾರ್ಮಿಕರಿಗೆ ಕೈ ಕುಂಚದಲ್ಲಿ ಚಿತ್ರ ಬಿಡಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ಶಿವಮೊಗ್ಗ: ಕುಂಚ ಕಲಾವಿದರಿಂದ ಕೊರೊನಾ ವಾರಿಯರ್ಸ್‌ಗೆ ಗೌರವ ಸಲ್ಲಿಕೆ - ಕೊರೊನಾ ವಾರಿಯರ್ಸ್‌ಗೆ ಗೌರವ ಸಲ್ಲಿಕೆ
ನಗರದ ಗೋಪಿ ವೃತ್ತದಲ್ಲಿ ಕೊರೊನಾ ವೈರಸ್ ಚಿತ್ರ ಬಿಡಿಸಿ ಜಾಗೃತಿ ಹಾಗೂ ಕೊರೊನಾ ಸಂದರ್ಭದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸಿದರು.
ಕೊರೊನಾ ವಾರಿಯರ್ಸ್‌ಗೆ ಗೌರವ ಸಲ್ಲಿಕೆ
ನಗರದ ಗೋಪಿ ವೃತ್ತದಲ್ಲಿ ಕೊರೊನಾ ವೈರಸ್ ಚಿತ್ರ ಬಿಡಿಸಿ ಜಾಗೃತಿ ಹಾಗೂ ಕೊರೊನಾ ಸಂದರ್ಭದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸಿದರು. ಮನೆಯಿಂದ ಅನಗತ್ಯವಾಗಿ ಹೊರಗಡೆ ಬರಬೇಡಿ, ನಮಗಾಗಿ ಕೊರೊನಾ ವಾರಿಯರ್ಸ್ ತಮ್ಮ ಜೀವವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಕಡಿಮೆ ಆಗುವವರೆಗೂ ಮನೆಯಲ್ಲಿಯೇ ಇದ್ದು, ಕೊರೊನಾ ತಡೆಗಟ್ಟೋಣ ಎಂದು ಜಾಗೃತಿ ಮೂಡಿಸುವ ಮೂಲಕ ಕೊರೊನಾ ವಾರಿಯರ್ಸ್‌ಗೆ ವಿಶೇಷ ಗೌರವ ಸಲ್ಲಿಸಿದರು.