ಶಿವಮೊಗ್ಗ:ಮೂರ್ಚೆ ರೋಗದಿಂದ ಬಳಲುತ್ತಿದ್ದ ಯುವತಿಯೊಬ್ಬಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ವಿದ್ಯಾನಗರ ದೂರದರ್ಶನ ಕೇಂದ್ರದ ಹಿಂಭಾಗ ನಡೆದಿದೆ.
ವಿದ್ಯಾನಗರದ ನಿವಾಸಿ ರಕ್ಷಿತ (18) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಇಂದು ಬೆಳಗ್ಗೆ ಮೈಸೂರಿನಿಂದ ಶಿವಮೊಗ್ಗಕ್ಕೆ ಬರುವ ರೈಲಿಗೆ ಸಿಲುಕಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರೈಲು ಆಕೆಯನ್ನು ಸುಮಾರು 150 ಮೀಟರ್ ದೂರ ಎಳೆದು ಕೊಂಡು ಹೋದ ಪರಿಣಾಮ ದೇಹ ನಜ್ಜು ಗುಜ್ಜಾಗಿದೆ.
ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ತಾಯಿ ಹೇಳಿಕೆ ರಕ್ಷಿತಳಿಗೆ ಹುಟ್ಟಿನಿಂದಲೂ ಮೂರ್ಛೆ ರೋಗ ಇತ್ತು. ಅಲ್ಲದೆ ಈಕೆಗೆ ಹರಿಣಿ ಆಗಿತ್ತು. ಇದಕ್ಕಾಗಿ ಅಪರೇಷನ್ ಕೂಡ ಮಾಡಿಸಲಾಗಿತ್ತು. ಬಳಿಕ ಹೊಟ್ಟೆ ನೋವು ಕಡಿಮೆ ಆಗದ ಕಾರಣ ನರಳುತ್ತಿದ್ದಳು ಎನ್ನಲಾಗಿದೆ. ತಾಯಿ ಮನೆ ಕೆಲಸ ಮಾಡುತ್ತಿದ್ದಳು. ರಕ್ಷಿತ ಮನೆಯಲ್ಲೆ ಇರುತ್ತಿದ್ದಳು. ಎಂದಿನಂತೆ ತಾಯಿ ಮನೆಗೆ ಬಂದು ನೋಡಿದಾಗ ಮಗಳು ಕಾಣದೆ ತಾಯಿ ಗಾಬರಿಗೊಂಡು ಹುಡುಕಾಡಿದಾಗ ಆತ್ಮಹತ್ಯೆ ವಿಷಯ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ರೈಲ್ವೆ ಎಎಸ್ಐ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಕೇಸು ದಾಖಲಿಸಿ ಕೊಂಡಿದ್ದಾರೆ.