ಶಿವಮೊಗ್ಗ: ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಹೊಸನಗರ ತಾಲೂಕು ಒಡ್ಡಿನಕೆರೆ ಬಳಿ ನಡೆದಿದೆ.
ಕೆರೆ ಏರಿ ಮೇಲೆ ಟ್ರ್ಯಾಕ್ಟರ್ ಪಲ್ಟಿ: ಸ್ಥಳದಲ್ಲೇ ಚಾಲಕ ಸಾವು - Tractor Driver Death
ಹೊಸನಗರ ತಾಲೂಕು ಒಡ್ಡಿನಕೆರೆ ಬಳಿ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಟ್ಯ್ರಾಕ್ಟರ್ ಚಾಲಕ ಸಾವು
ಚಂದ್ರಶೇಖರ್(22) ಮೃತ ಚಾಲಕನಾಗಿದ್ದು, ಮೂಲತಃ ಸೊರಬದವರು. ತನ್ನ ಅಜ್ಜನ ಮನೆಯಲ್ಲಿದ್ದು, ನಾಟಿಗಾಗಿ ಗದ್ದೆಯಲ್ಲಿ ಕೆಸರು ಹೊಡೆದು ಮನೆಗೆ ವಾಪಸ್ ಬರುವಾಗ ಕೆರೆ ಏರಿ ಮೇಲೆ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ಕುರಿತು ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.