ಶಿವಮೊಗ್ಗ: ಪ್ರವಾಸ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಬಸ್ ಪಲ್ಟಿಯಾಗಿರುವ ಘಟನೆ ಸಾಗರ ತಾಲೂಕು ಹುರಳಿ ಗ್ರಾಮದ ಬಳಿ ನಡೆದಿದೆ.
ಕದರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹುರುಳಿ ಗ್ರಾಮದ ನಿವಾಸಿಗಳು ತಮ್ಮ ಸಂಬಂಧಿಕರ ಜೊತೆ ಧರ್ಮಸ್ಥಳ, ಮಂಗಳೂರು ಸೇರಿದಂತೆ ಇತರೆ ಕಡೆ ಪ್ರವಾಸ ಮುಗಿಸಿ ಗ್ರಾಮಕ್ಕೆ ವಾಪಸ್ ಆಗುವ ವೇಳೆ ಹುರುಳಿ ಗ್ರಾಮದ ಬಳಿಯೇ ಬಸ್ ಪಲ್ಟಿಯಾಗಿದೆ.