ಶಿವಮೊಗ್ಗ: ಬಿಜೆಪಿಯವರು ಶರಾವತಿ ಸಂತ್ರಸ್ತರ ಮೂಗಿಗೆ ತುಪ್ಪ ಸವರುವ ಕೆಲಸ ಇನ್ಮುಂದೆ ನಡೆಯಲ್ಲ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸೋಮವಾರ ನಡೆಯುವ ಮುಳುಗಡೆ ಸಂತ್ರಸ್ತರ ಸಮಾವೇಶದ ವೇದಿಕೆ ವೀಕ್ಷಿಸಿದ ನಂತರ ಇಂದು ಈಟಿವಿ ಭಾರತ ಜೊತೆ ಮಾತನಾಡಿದ ಅವರು. ನಾಳೆ ಮಲೆನಾಡಿನ ಜನಾಕ್ರೋಶ ಎಂಬ ಕಾರ್ಯಕ್ರಮ ಮಾಡುತ್ತಿದ್ದೇವೆ. ನಾಡಿಗೆ ಬೆಳಕನ್ನು ಕೊಟ್ಟಂತಹ ಜನರನ್ನು ಕತ್ತಲಲ್ಲಿ ಕೂರಿಸಿರುವ ಬಿಜೆಪಿ ಸರ್ಕಾರದ ವಿರುದ್ಧ ಸಮಾವೇಶ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹಾಗೂ ಪಕ್ಷದ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಗೋಡು ತಿಮ್ಮಪ್ಪ ಅವರು ವಹಿಸಲಿದ್ದಾರೆ ಪಾದಯಾತ್ರೆ ಬೆಳಗ್ಗೆ ಆಯನೂರಿನಿಂದ ಪ್ರಾರಂಭವಾಗಲಿದೆ. ನಂತರ ದೊಡ್ಡ ಮಟ್ಟದ ಸಮಾವೇಶ ಸಂಜೆ ನಡೆಯಲಿದೆ. ಲಕ್ಷಾಂತರ ಜನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮೂಗಿಗೆ ತುಪ್ಪ ಸವರುವ ಕೆಲಸ ಇನ್ಮುಂದೆ ನಡೆಯಲ್ಲ: ಮಧು ಬಂಗಾರಪ್ಪ ಮೂಗಿಗೆ ತುಪ್ಪ ಸವರುವ ಕೆಲಸ: ಚುನಾವಣೆ ಸಂದರ್ಭದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ. ಈ ತುಪ್ಪ ಸವರುವ ಕೆಲಸ ನಿಲ್ಲಿಸಿ ಸಾಕು. ನಾಡಿನ ಜನ ದಡ್ಡರಲ್ಲ. ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೀರ್ಥಹಳ್ಳಿಯಲ್ಲಿ ಅಡಕೆ ಸಂಶೋಧನಾ ಕೇಂದ್ರ ಸ್ಥಾಪಿಸುವುದಾಗಿ ಹೇಳಿ ಜನರ ಮೂಗಿಗೆ ತುಪ್ಪ ಸವರಿದ್ದರು. ಈಗ ಮುಖ್ಯಮಂತ್ರಿಗಳು ತೀರ್ಥಹಳ್ಳಿಗೆ ಬಂದು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಜನರೇ ಬದಲಾವಣೆ ತರುತ್ತಾರೆ: ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ, ಆದರೂ ಯಾಕೆ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಿಲ್ಲ. ಕೊಟ್ಟಿರುವ ಹಕ್ಕು ಪತ್ರವನ್ನು ಹಿಂಪಡೆದು ಮತ್ತೆ ಅದನ್ನೇ ಕೊಡುವ ಕೆಲಸ ಮಾಡುತ್ತಿದ್ದಾರೆ. ಈ ಕಣ್ಣೋರಿಸುವ ತಂತ್ರವನ್ನು ಜನ ಒಪ್ಪಲ್ಲ. ಜಾತಿ ಹೆಸರಲ್ಲಿ ಚುನಾವಣೆ ಮಾಡಿಕೊಂಡು ಬಂದಿರುವುದನ್ನು ಜನ ನೋಡಿದ್ದಾರೆ. ಜನರು ಆಕ್ರೋಶದ ಮೇಲೆ ಬದಲಾವಣೆ ತರುತ್ತಾರೆ ಎಂದರು.
ಇದನ್ನೂ ಓದಿ:ನಾಡಿದ್ದು ಶರಾವತಿ ಸಂತ್ರಸ್ತರ ಪರವಾಗಿ ಮಲೆನಾಡು ಜನಾಕ್ರೋಶ ಪಾದಯಾತ್ರೆ: ಮಧು ಬಂಗಾರಪ್ಪ