ಕರ್ನಾಟಕ

karnataka

ETV Bharat / state

ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರು ಪಾಲು - ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ

ದಂಡೆಯಲ್ಲಿ ಮೊಬೈಲ್ ಹಾಗೂ ಬಟ್ಟೆ ಇರುವುದನ್ನು ಗಮನಿಸಿದ ಪೊಲೀಸರು, ಅಗ್ನಿ ಶಾಮಕದಳದವರನ್ನ ಕರೆಸಿ ಇಬ್ಬರ ಶವವನ್ನು ಹೊರಗೆ ತೆಗೆದಿದ್ದಾರೆ. ಈ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರು ಪಾಲು
ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರು ಪಾಲು

By

Published : Mar 22, 2022, 5:49 PM IST

ಶಿವಮೊಗ್ಗ:ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದೆ. ತೀರ್ಥಹಳ್ಳಿಯ ರಾಮಮಂಟಪದ ಬಳಿಯ ಬಿಎ ವಿದ್ಯಾರ್ಥಿಯಾದ ವರ್ಧನ್ (19) ಹಾಗೂ ಮಂಜು (20) ಎಂಬುವರು ಸೋಮವಾರ ಮಧ್ಯಾಹ್ನ ಈಜಲು ಹೋಗಿದ್ದಾರೆ. ಮಂಜು ಎಲೆಕ್ಟ್ರಾನಿಕ್ ಕೆಲಸ ಮಾಡುತ್ತಿದ್ದರು.

ಇಬ್ಬರು ನದಿಯಲ್ಲಿ ಈಜಲು ಹೋಗಿರುವ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ವರ್ಧನ್ ಪೋಷಕರು ಹುಡುಕಾಟ ನಡೆಸಿ, ಬಳಿಕ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಆಗ ಪೊಲೀಸರು ವರ್ಧನ್ ಮೊಬೈಲ್ ನೆಟ್‌ವರ್ಕ್ ಲೋಕೇಷನ್ ಆಧರಿಸಿ, ವರ್ಧನ್​ ಇರುವ ಸ್ಥಳದ ಮಾಹಿತಿ ಕಂಡು ಹಿಡಿದಿದ್ದಾರೆ.

ಇದನ್ನೂ ಓದಿ:ಕಿವಿ ಚಿಕಿತ್ಸೆಗೆ ಬಂದ ಮಹಿಳೆ ಸಾವು: ಗದಗ ಜಿಮ್ಸ್‌ ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ

ನಂತರ ದಂಡೆಯಲ್ಲಿ ಮೊಬೈಲ್ ಹಾಗೂ ಬಟ್ಟೆ ಇರುವುದನ್ನು ಗಮನಿಸಿದ ಪೊಲೀಸರು, ಅಗ್ನಿ ಶಾಮಕದಳದವರನ್ನ ಕರೆಸಿ ಇಬ್ಬರ ಶವವನ್ನು ಹೊರಗೆ ತೆಗೆದಿದ್ದಾರೆ. ಈ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details