ಕರ್ನಾಟಕ

karnataka

ETV Bharat / state

ಕಾಲೇಜು‌ ವಿದ್ಯಾರ್ಥಿನಿಯರ ಮೇಲೆ ಹರಿದ ಟಿಪ್ಪರ್: ಒಂದು ಸಾವು, ಇಬ್ಬರಿಗೆ ಗಾಯ - ಪಿಯುಸಿ ಓದುತ್ತಿದ್ದ ಪ್ರತಿಮಾ ಎಂಬ ವಿದ್ಯಾರ್ಥಿನಿ ಸಾವು

ವಿದ್ಯಾರ್ಥಿಗಳ ಮೇಲೆ ಹರಿದ ಯಮ ಸ್ವರೂಪಿ ಲಾರಿ - ಪಿಯುಸಿ ಓದುತ್ತಿದ್ದ ಪ್ರತಿಮಾ ಎಂಬ ವಿದ್ಯಾರ್ಥಿನಿ ಸಾವು - ಹಾಸ್ಟೆಲ್​ನಿಂದ ಕಾಲೇಜ್​ಗೆ ತೆರಳುವ ವೇಳೆ ದುರ್ಘಟನೆ.

Tipper lorry hit  students in Shivamagga
ಕಾಲೇಜು‌ ವಿದ್ಯಾರ್ಥಿನಿಯರ ಮೇಲೆ ಹರಿದ ಟಿಪ್ಪರ್ ಲಾರಿ

By

Published : Dec 28, 2022, 12:24 PM IST

Updated : Dec 28, 2022, 2:22 PM IST

ಶಿವಮೊಗ್ಗ: ಕಾಲೇಜು ವಿದ್ಯಾರ್ಥಿಗಳ ಮೇಲೆ ಟಿಪ್ಪರ್ ಲಾರಿ ಹರಿದ ಪರಿಣಾಮ ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿರುವ ಘಟನೆ ಸಾಗರದ ಸಣ್ಣಮನೆ ಬಳಿ‌ ನಡೆದಿದೆ. ಹಾಸ್ಟಲ್​ನಿಂದ ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಯರ ಮೇಲೆ ವೇಗವಾಗಿ ಬಂದ ಲಾರಿ ಏಕಾಏಕಿ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ದ್ವಿತೀಯ ಪಿಯುಸಿ ಓದುತ್ತಿದ್ದ ಪ್ರತಿಮಾ ಎಂಬ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಪ್ರತಿಮಾಳ ತಲೆಗೆ ತೀವ್ರ ಗಾಯವಾಗಿ ಅಸ್ವಸ್ಥವಾಗಿದ್ದಳು. ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗಲಿಲ್ಲ. ಪ್ರತಿಮಾ ಶಿಕಾರಿಪುರ ತಾಲೂಕು ಚಿಕ್ಕಕಲವತ್ತಿ ಗ್ರಾಮದ ರೈತಾಪಿ ಕುಟುಂಬದವಳಾಗಿದ್ದು, ಪ್ರತಿಮಾ ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದಳು. ಈಕೆಯ ಸಾವನಿಂದ ಕಾಲೇಜಿಗೆ ರಜೆ ನೀಡಲಾಗಿದೆ.

ಮೂವರು ವಿದ್ಯಾರ್ಥಿನಿಯರು ಸಾಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರು. ಹಾಸ್ಟೆಲ್​ನಿಂದ ಕಾಲೇಜಿಗೆ ತೆರಳುವ ವೇಳೆ ಟಿಪ್ಪರ್​ ಗುದ್ದಿದೆ. ಲಾರಿ ಚಾಲಕ ಕುಡಿದು ವೇಗವಾಗಿ ಓಡಿಸಿದ್ದರಿಂದ ಅಪಘಾತ ಸಂಭವಿಸಿದೆ. ಅಂಕಿತಾ ಮತ್ತು ಐಶ್ವರ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ರಸ್ತೆ ಬದಿ ನಿಂತಿದ್ದಾಗ ಕಾರು ಢಿಕ್ಕಿ: ಉಳ್ಳಾಲದಲ್ಲಿ ಬಾಲಕ ಸಾವು

Last Updated : Dec 28, 2022, 2:22 PM IST

ABOUT THE AUTHOR

...view details