ಶಿವಮೊಗ್ಗ: ಚಲಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಸಾಗರದ ಬಳಿ ನಡೆದಿದೆ.
ಮರಕ್ಕೆ ಡಿಕ್ಕಿ ಹೊಡೆದ ಕಾರು: ಮೂವರು ಸಾವು, ಓರ್ವ ಗಂಭೀರ - ಶಿವಮೊಗ್ಗ ಕಾರು ಅಪಘಾತ
ಚಲಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಸಾಗರದ ಬಳಿ ನಡೆದಿದೆ.
ಜಿಲ್ಲೆಯ ಸಾಗರ ತಾಲೂಕು ಕಾಸ್ಪಡಿ ಬಳಿ ಕಾರು ಮರಕ್ಕೆ ಢಿಕ್ಕಿ ಹೊಡೆದಿದೆ. ಮೃತರಾದವರು ರಾಯಚೂರು ಮೂಲದವರು ಎಂದು ತಿಳಿದು ಬಂದಿದೆ. ಒಟ್ಟು ಮೂರು ಕಾರುಗಳಲ್ಲಿ ಆಗಮಿಸುತ್ತಿದ್ದರು. ರಾಯಚೂರಿನ ಶಕ್ತಿ ನಗರದಿಂದ ಸಾಗರದ ಕಾರ್ಗಲ್ಗೆ ಬರುವಾಗ ಅವಘಡ ಸಂಭವಿಸಿದೆ. ಸಿದ್ದಪ್ಪ, ತಿಮ್ಮಪ್ಪ ಹಾಗೂ ವೆಂಟಕೇಶ್ ಮೃತರಾಗಿದ್ದು, ನಾಗರಾಜ್ ಎಂಬುವರಿಗೆ ಗಂಭೀರ ಗಾಯವಾಗಿದೆ.
ಇನ್ನು ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾವನ್ನಪ್ಪಿದವರ ಶವ ಪರೀಕ್ಷೆಯ ನಂತರ ಶವಗಳನ್ನು ರಾಯಚೂರಿಗೆ ಕಳಹಿಸಲಾಗುತ್ತದೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.