ಕರ್ನಾಟಕ

karnataka

ETV Bharat / state

ಭದ್ರಾವತಿಯಲ್ಲಿ 85 ವರ್ಷದ ವೃದ್ಧೆಯ ಸರ ಎಗರಿಸಿದ್ದ ಮೂವರು ಖದೀಮರು ಅಂದರ್ - ವೃದ್ಧೆಯ ಸರ ಕಳುವು

ಪೋಸ್ಟ್ ಆಫೀಸ್​​​ಗೆ ಹೋಗುತ್ತಿದ್ದ ಅಜ್ಜಿಯ ಸರ ಕದ್ದು ಪರಾರಿಯಾಗಿದ್ದ ಮೂವರು ಸರಗಳ್ಳರನ್ನು ಶಿವಮೊಗ್ಗದ ಪೇಪರ್ ಟೌನ್ ಪೊಲೀಸರು ಬಂಧಿಸಿದ್ದಾರೆ.

arrest
arrest

By

Published : Jun 20, 2021, 10:11 PM IST

ಶಿವಮೊಗ್ಗ: ಪೋಸ್ಟ್ ಆಫೀಸ್​​​ಗೆ ಹೋಗುತ್ತಿದ್ದ ಅಜ್ಜಿಯ ಸರ ಕದ್ದು ಪರಾರಿಯಾಗಿದ್ದ ಮೂವರು ಸರಗಳ್ಳರನ್ನು ಭದ್ರಾವತಿ ಪೇಪರ್ ಟೌನ್ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿಯ ಪೋಸ್ಟ್ ಆಫೀಸ್ ರಸ್ತೆಯಲ್ಲಿ ಶನಿವಾರ ಲಕ್ಷ್ಮಮ್ಮ ಎಂಬ 85 ವರ್ಷದ ವೃದ್ಧೆ ನಡೆದು‌ಕೊಂಡು ಹೋಗುವಾಗ ಎರಡು ಬೈಕ್​​ನಲ್ಲಿ ಬಂದ ಮೂವರು ಅಜ್ಜಿಯ ಸರ ಕದ್ದು ಪರಾರಿಯಾಗಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೇಪರ್ ಟೌನ್ ಪೊಲೀಸರು ಕೃತ್ಯ ನಡೆದ 24 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭದ್ರಾವತಿ ಎರೆಹಳ್ಳಿಯ ಪವನ್(19), ಸಂಜಯ ಕಾಲೋನಿಯ ವಿಷ್ಣು(19) ಹಾಗೂ ಹೆಬ್ಬಂಡಿಯ‌ ಮಹೇಶ್(19) ಬಂಧಿತ ಆರೋಪಿಗಳು.

ಇವರುಗಳಿಂದ 103 ಗ್ರಾಂ ತೂಕದ 4 ಲಕ್ಷದ 63 ಸಾವಿರ ರೂ. ಮೌಲ್ಯದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಎರಡು ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಮೂವರು ನ್ಯೂಟೌನ್ ಹಾಗೂ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು.

ABOUT THE AUTHOR

...view details