ಶಿವಮೊಗ್ಗ: ನಗರದ ವಿವಿಧೆಡೆ ನಡೆದ ದ್ವಿಚಕ್ರ ವಾಹನಗಳ ಕಳ್ಳತನದ ಆರೋಪದಡಿ ಮೂವರನ್ನು ಬಂಧಿಸಿದ ಪೊಲೀಸರು, 11 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂವರು ಬೈಕ್ ಕಳ್ಳತನ ಆರೋಪಿಗಳ ಬಂಧನ: 11 ಬೈಕ್ ವಶ - ದ್ವಿಚಕ್ರ ವಾಹನ ಕಳ್ಳತನ ಪ್ರಕರಣ
ಕಳೆದ ಒಂದು ತಿಂಗಳಲ್ಲಿ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧ, ತಬಾರಕ್ ಅಲಿಯಾಸ್ ತಪ್ಪಣ್ಣ (19), ಸೈಯದ್ ಸುಭಾನ್ (20) ಮತ್ತು ಜುನೈದ್ ಅಲಿಯಾಸ್ ಜಿನ್ನು (19) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

bike stealer
ತಬಾರಕ್ ಅಲಿಯಾಸ್ ತಪ್ಪಣ್ಣ (19), ಸೈಯದ್ ಸುಭಾನ್ (20) ಮತ್ತು ಜುನೈದ್ ಅಲಿಯಾಸ್ ಜಿನ್ನು (19) ಬಂಧಿತ ಆರೋಪಿಗಳು. ಕಳೆದ ಒಂದು ತಿಂಗಳಲ್ಲಿ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧ, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.
ಬಂಧಿತ ಆರೋಪಿಗಳಿಂದ 3.44 ಲಕ್ಷ ರೂ. ಮೌಲ್ಯದ 11 ಬೈಕ್ ವಶಕ್ಕೆ ಪಡೆಯಲಾಗಿದೆ. ತುಂಗಾನಗರ ಪಿಎಸ್ಐ ತಿರುಮಲೇಶ್ ಹಾಗೂ ಜಿ.ಆರ್ ನಾರಾಯಣ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.