ಶಿವಮೊಗ್ಗ:ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪನವರಿಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ಈ ಸಂಬಂಧ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅವರು ಪತ್ರ ಬರೆದು ಸೂಕ್ತ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.
ಈಶ್ವರಪ್ಪನವರ ಮುಸ್ಲಿಂ ಗೂಂಡಾಗಳೇ ಹೇಳಿಕೆ ವಿಷಯವಾಗಿ ಈ ಬೆದರಿಕೆ ಪತ್ರ ಬರೆಯಲಾಗಿದೆ. ಮುಸ್ಲಿಂ ಗೂಂಡಾಗಳೇ ಅನ್ನುವ ಈಶ್ವರಪ್ಪ ನಿನಗೆ, ನಿನ್ನ ಶಾಲೆ ಕಟ್ಟಲು ಮುಸ್ಲಿಮರು ಬೇಕು. ಆದರೆ, ನಿನಗೆ ಮುಸ್ಲಿಮರು ಬೇಡ. ನಾಲಿಗೆ ಬಿಚ್ ಬೇಡ, ನಾಲಿಗೆ ಕಟ್ ಮಾಡುತ್ತೇವೆ, ಹುಷಾರ್ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.