ಶಿವಮೊಗ್ಗ: ಈ ಅಧಿವೇಶನಲ್ಲಿಯೇ ಗೋ ಹತ್ಯೆ ತಡೆ ವಿಧೇಯಕಕ್ಕೆ ಒಪ್ಪಿಗೆ ಪಡೆಯಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸಾಗರದಲ್ಲಿ ತಿಳಿಸಿದ್ದಾರೆ.
ಸಾಗರದ ನಗರಸಭೆ ವತಿಯಿಂದ ನಡೆದ ಪೌರ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ, ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಹಿಂದೆಯೇ ಗೋ ಹತ್ಯೆ ತಡೆ ವಿಧೇಯಕಕ್ಕೆ ಅಧಿವೇಶನದಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರ ಅನುಮತಿಗೆ ಕಳುಹಿಸಲಾಗಿತ್ತು. ಆದರೆ, ಅವರು ಒಪ್ಪಿಗೆ ನೀಡಿರಲಿಲ್ಲ. ಇದರಿಂದ ನಾಳೆ ಗೋ ಹತ್ಯೆ ತಡೆ ವಿಧೇಯಕ ಮಂಡಿಸಿ, ಜಾರಿ ಮಾಡಲಾಗುವುದು. ಲವ್ ಜಿಹಾದ್ ಕಾನೂನು ವಿಧೇಯಕವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು. ಈ ಅಧಿವೇಶನದಲ್ಲಿ ಎಲ್ಲಾ ವರ್ಗಕ್ಕೂ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.