ಶಿವಮೊಗ್ಗ:ವಿದ್ಯಾರ್ಥಿಗಳಿಗೆ ಪಾಠ ಮಾಡಲು ತೆರಳುತ್ತಿದ್ದ ಶಿಕ್ಷಕಿಯನ್ನು ಬೆದರಿಸಿ ಆಕೆಯ ಮೈಮೇಲಿದ್ದ ಸುಮಾರು 4 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಆರೋಡಿ ಬಳಿ ನಡೆದಿದೆ.
ಶಿವಮೊಗ್ಗ : ಶಿಕ್ಷಕಿಯನ್ನು ಅಡ್ಡಗಟ್ಟಿ 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು - Thieves attack on teacher
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಆರೋಡಿ ಬಳಿ ಪಾಠ ಹೇಳಿ ಕೊಡಲು ತೆರಳುತ್ತಿದ್ದ ಶಿಕ್ಷಕಿಯನ್ನು ಅಡ್ಡಗಟ್ಟಿದ ಖದೀಮರು ನಾಲ್ಕು ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ.
![ಶಿವಮೊಗ್ಗ : ಶಿಕ್ಷಕಿಯನ್ನು ಅಡ್ಡಗಟ್ಟಿ 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು Theft case](https://etvbharatimages.akamaized.net/etvbharat/prod-images/768-512-07:31:54:1598450514-kn-smg-06-teacher-theft-7204213-26082020192956-2608f-1598450396-85.jpg)
Theft case
ಆರೋಡಿಯ ಕೊಡಸೆಯ ಸರ್ಕಾರಿ ಶಾಲೆಯ ಶಿಕ್ಷಕಿ ಮಂಜುಳಾ ಮನೆ ಮನೆಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುತ್ತಿದ್ದರು. ಇಂದು ಸಹ ಎಂದಿನಂತೆ ಶಿಕ್ಷಕಿ ಹೋಗುತ್ತಿದ್ದ ವೇಳೆ ಆರೋಡಿ ಸಂಸೆ ಬರೇಕಲ್ ಹೋಂ ಸ್ಟೇ ರಸ್ತೆಯಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರ ತೋರಿಸಿ, ಒಡವೆಗಳನ್ನು ನೀಡುವಂತೆ ಬೆದರಿಕೆ ಹಾಕಿ ಅವರ ಬಳಿಯಿದ್ದ ಮಾಂಗಲ್ಯಸರ, ಸರ, ಬಳೆ, ಉಂಗುರ ಒಟ್ಟು 92 ಗ್ರಾಂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಹೊಸನಗರ ಸಿಪಿಐ ಮಧುಸೂಧನ್, ನಗರ ಠಾಣೆ ಪಿಎಸ್ಐ ಸಿ.ಆರ್. ಕೊಪ್ಪದ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.