ಶಿವಮೊಗ್ಗ : ಕೆಲಸ ನೀಡಿ, ಅನ್ನ ಹಾಕಿದ ಮಾಲೀಕನ ಮನೆಗೆ ಕನ್ನ ಹಾಕಿದ ಖದೀಮನೋರ್ವನನ್ನು ಪೊಲೀಸರು ಬಂಧನ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಅಬ್ದುಲ್ ದಿಲಾವರ್ ಮಲ್ಲಿಕ್(31) ಬಂಧಿತ ಆರೋಪಿ.
ನಗರದ ತಿರುಪಳಯ್ಯನಕೇರಿಯ ಬಂಗಾರದ ಅಂಗಡಿಯಲ್ಲಿ ಕೆಲಸಕ್ಕಿದ್ದ ಅಬ್ದುಲ್ ದಿಲಾವರ್ ಮಲ್ಲಿಕ್ನನ್ನು ಅಂಗಡಿಯ ಮಾಲೀಕ ತಾನೇ ರೂಂ ಮಾಡಿಟ್ಟು ಊಟವನ್ನು ನೀಡುತ್ತಿದ್ದ. ಇಂತಹ ಮಾಲೀಕನ ಮನೆಗೆ ಕನ್ನ ಹಾಕಿದ್ದ ಅಬ್ದುಲ್ ಮಲ್ಲಿಕ್, 72 ಗ್ರಾಂ ತೂಕದ 3.40 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದ.