ಶಿವಮೊಗ್ಗ: ಜಿಲ್ಲೆಯಲ್ಲಿ ಮೆಗ್ಗಾನ್ ಆಸ್ಪತ್ರೆ ಆಸ್ಪತ್ರೆ ಸೇರಿ ನಾಲ್ಕು ಕೋವಿಡ್ ಕೇರ್ ಸೆಂಟರ್ಗಳು ಇರುವುದರಿಂದ ಹೋಟೆಲ್ ಬಳಕೆ ಮಾಡುತ್ತಿಲ್ಲ. ಈ ಕುರಿತು ಹೋಟೆಲ್ ಸಂಘ ಹಾಗೂ ಮಾಲೀಕರ ಜೊತೆ ಮಾತುಕತೆಯೇ ನಡೆಸಿಲ್ಲ. ಸದ್ಯಕ್ಕೆ ಜಿಲ್ಲೆಯಲ್ಲಿ ಹೋಟೆಲ್ ಬಳಕೆಯ ಕುರಿತು ಯಾವುದೇ ಚಿಂತನೆ ಇಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಒಂದು ವೇಳೆ ಪೊಲೀಸರು, ವೈದ್ಯರಿಗೆ ಸೋಂಕು ಕಂಡು ಬಂದರೆ ಅವರನ್ನು ಹೋಟೆಲ್ನ ಒಂದು ಅಥವಾ ಎರಡು ರೂಮ್ಗಳನ್ನು ಪಡೆದು ದಾಖಲು ಮಾಡಲಾಗುತ್ತದೆ. ಅದರಲ್ಲೂ ರೋಗ ಲಕ್ಷ್ಮಣಗಳಿದ್ದರೆ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂದರು.