ಶಿವಮೊಗ್ಗ: ನಗರದ ಆರ್.ಎಂ.ಎಲ್. ಬಡಾವಣೆಯ ಪ್ರಸನ್ನ ಗಣಪತಿ ದೇವಾಲಯದಲ್ಲಿನ ಶನೇಶ್ವರ ಗುಡಿಯಲ್ಲಿ ಹುಂಡಿ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಸನ್ನ ಗಣಪತಿ ದೇವಾಲಯದ ಆವರಣದಲ್ಲಿ ಶನೇಶ್ವರ ದೇವರ ಸಣ್ಣ ಗುಡಿ ಇದ್ದು, ನಿನ್ನೆ ರಾತ್ರಿ ದೇವಾಲಯದ ಒಳಗೆ ನುಗ್ಗಿದ ಖದೀಮರು ಹುಂಡಿ ಜೊತೆಗೆ ಬೆಳ್ಳಿಯ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.