ಕರ್ನಾಟಕ

karnataka

ETV Bharat / state

ಅಂಗಡಿ ಲಾಕ್ ಮುರಿದು 87 ಸಾವಿರ ರೂ ನಗದು ಕಳ್ಳತನ - kannada news

ಕಳ್ಳರ ಗುಂಪೊಂದು ಸೆರಾಮಿಕ್ ಟೈಲ್ಸ್ ಅಂಗಡಿಯ ಲಾಕ್ ಮುರಿದು 87 ಸಾವಿರ ರೂ ನಗದು ಕಳ್ಳತನ ಮಾಡಿದ್ದಾರೆ.

ಸೆರಾಮಿಕ್ ಟೈಲ್ಸ್ ಅಂಗಡಿಯ ಕಳ್ಳತನ

By

Published : May 8, 2019, 3:50 AM IST

ಶಿವಮೊಗ್ಗ: ನಗರದ ಸರ್.ಎಂ.ವಿಶ್ವೇಶ್ವರಯ್ಯ (ಸವಳಂಗ) ರಸ್ತೆಯ ಕಾವೇರಿ ಸೆರಾಮಿಕ್​ನಲ್ಲಿ ರಾತ್ರಿ ಕಳ್ಳತನ ನಡೆದ ಪ್ರಕರಣ ಬೆಳಕಿಗೆ ಬಂದಿದೆ.

ನಿನ್ನೆ ರಾತ್ರಿ ಕಳ್ಳರ ಗುಂಪೊಂದು ಸೆರಾಮಿಕ್ ಟೈಲ್ಸ್ ಅಂಗಡಿಯ ಲಾಕ್ ಮುರಿದು ಒಳಗೆ ನುಗ್ಗಿ, 87 ಸಾವಿರ ರೂ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಬೆಳಗ್ಗೆ ಅಂಗಡಿ ತೆರೆಯಲು ಬಂದಾಗ ಕಳ್ಳತನವಾಗಿರುವುದು ತಿಳಿದು ಬಂದಿದ್ದು, ತಕ್ಷಣ ಅಂಗಡಿ ಮಾಲೀಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಜಯನಗರ ಪೊಲೀಸರು ಹಾಗೂ ಶ್ವಾನದಳದವರು ಹಾಗೂ ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ABOUT THE AUTHOR

...view details