ಶಿವಮೊಗ್ಗ:ಯುವತಿವೋರ್ವಳ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಭಗ್ನ ಪ್ರೇಮಿಗಳು ಹೊಡೆದಾಡಿಕೊಂಡಿದ್ದು, ಈ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ ಕಂಡಿದೆ.
ಶಿವಮೊಗ್ಗದಲ್ಲಿ ಇಬ್ಬರು ಭಗ್ನ ಪ್ರೇಮಿಗಳ ನಡುವೆ ಗಲಾಟೆ: ಓರ್ವನ ಕೊಲೆ - ಶಿವಮೊಗ್ಗದ ನ್ಯೂ ಮಂಡಲಿ
ಯುವತಿಯ ವಿಚಾರದಲ್ಲಿ ಇಬ್ಬರು ಭಗ್ನ ಪ್ರೇಮಿಗಳ ನಡುವೆ ಗಲಾಟೆ ನಡೆದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಇಬ್ಬರು ಭಗ್ನ ಪ್ರೇಮಿಗಳ ನಡುವೆ ಗಲಾಟೆ
ನಗರದ ನ್ಯೂ ಮಂಡ್ಲಿಯಲ್ಲಿ ಈ ಘಟನೆ ನಡೆದಿದ್ದು, ಮೊಹಮ್ಮದ್ ಅಲಿ (24) ಎಂಬಾತ ಚಾಕು ಇರಿತಕ್ಕೊಳಗಾಗಿ ಸಾವನ್ನಪ್ಪಿದ್ದಾನೆ.
ತೌಸಿಫ್ ಎಂಬ ಆರೋಪಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Last Updated : Jan 19, 2020, 11:05 PM IST