ಶಿವಮೊಗ್ಗ: ಯುವಕನೋರ್ವ ಕುಡಿಯುವ ನೀರಿನ ಟ್ಯಾಂಕ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಗಾಜನೂರಿನಲ್ಲಿ ನಡೆದಿದೆ.
ಕುಡಿಯುವ ನೀರಿನ ಟ್ಯಾಂಕ್ ಮೇಲಿಂದ ಬಿದ್ದು ಯುವಕ ಆತ್ಮಹತ್ಯೆ - undefined
ಕುಡಿಯುವ ನೀರಿನ ಟ್ಯಾಂಕ್ ಮೇಲಿಂದ ಯುವಕನೋರ್ವ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯುವಕ ಆತ್ಮಹತ್ಯೆ
ಗಾಜನೂರಿನ ಸರ್ಕಾರಿ ಶಾಲೆ ಮೈದಾನದಲ್ಲಿರುವ ನೀರಿನ ಟ್ಯಾಂಕ್ ಮೇಲಿಂದ ಕೆಳಗೆ ಬಿದ್ದು 20 ವರ್ಷದ ರಾಜು ಎಂಬಾತ ಸಾವನ್ನಪ್ಪಿದ್ದಾನೆ. ರಾಜು ಮೇಲಿಂದ ಬಿದ್ದ ಪರಿಣಾಮ ರಾಜುವಿನ ದೇಹ ಭೂಮಿ ಒಳಗೆ ಹೋದಂತೆ ಆಗಿದೆ.
ಇಂದು ಬೆಳಗ್ಗೆ ನೀರು ಬಿಡಲು ಹೋದಾಗ ರಾಜು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ರಾಜುವಿನ ಮನೆಯವರ ರೋದನ ಮುಗಿಲು ಮುಟ್ಟಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ತುಂಗಾನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.