ಶಿವಮೊಗ್ಗ:ನೆರೆ ಪೀಡಿತರು ಹಾಗೂ ರೈತರ ನೆರವಿಗೆ ರಾಜ್ಯ ಸರ್ಕಾರ ಯಾವಾಗಾಲೂ ಸಿದ್ಧವಾಗಿದೆ. ಕಳೆದ ಎರಡು ತಿಂಗಳ ಹಿಂದೆ ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಬಂದಿತ್ತು. ಸಾಕಷ್ಟು ಜನ ಮನೆ ಮಠ ಕಳೆದುಕೊಂಡಿದ್ದರೂ ಸರ್ಕಾರ ಮಾತ್ರ ಸಂತ್ರಸ್ತರ ಹಾಗೂ ರೈತರ ಕೈ ಬಿಟ್ಟಿರಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಪ್ರವಾಹಪೀಡಿತರ ನೆರವಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ: ಸಚಿವ ಕೆ.ಎಸ್. ಈಶ್ವರಪ್ಪ
ರಾಜ್ಯದಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ಸರ್ಕಾರ ಯಾವಾಗಲೂ ನೆರೆ ಪೀಡಿತರ ಹಾಗೂ ರೈತರ ನೆರವಿಗೆ ಇರಲಿದೆ ಎಂದು ಆಶ್ವಾಸನೆ ನೀಡಿದ್ದಾರೆ.
ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಡಲು ಸರ್ಕಾರ ಒಂದು ಲಕ್ಷ ರೂ ನೀಡುತ್ತಿದೆ. ಕೇಂದ್ರದಿಂದ ಬಂದ 1200 ಕೋಟಿ ರೂ.ಗಳಲ್ಲಿ 1053 ಕೋಟಿ ರೂ.ಗಳನ್ನು ನೆರೆ ಪರಿಹಾರಕ್ಕೆ ಮೀಸಲಿಟ್ಟಿದೆ ಎಂದರು.
ಈಗಾಗಲೇ ನೆರೆಯಿಂದ ಮನೆ ಹಾಗೂ ಬೆಳೆ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ನೀಡುತ್ತಿದೆ. ಇನ್ನು ಮುಂದೆಯೂ ಸಹ ರಾಜ್ಯ ಸರ್ಕಾರ ನೆರೆ ಪೀಡಿತರ ಪರವಾಗಿಯೇ ಇರುತ್ತದೆ ಎಂದು ಸಚಿವರು ಅಭಯ ನೀಡಿದ್ರು.