ಕರ್ನಾಟಕ

karnataka

ಶಿವಮೊಗ್ಗ ಸೇರಿ ಮಹಾನಗರ ಪಾಲಿಕೆ ಮೇಯರ್,ಉಪಮೇಯರ್ ಆಯ್ಕೆಗೆ ಮೀಸಲಾತಿ ಪ್ರಕಟ

By

Published : Dec 28, 2019, 12:29 PM IST

ಶಿವಮೊಗ್ಗ ಜಿಲ್ಲೆ ಸೇರಿದಂತೆ ಮಹಾನಗರ ಪಾಲಿಕೆಗಳ ನೂತನ ಮೇಯರ್, ಉಪಮೇಯರ್ ಆಯ್ಕೆಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ.

shivamogga
ಸುವರ್ಣಾ ಶಂಕರ್, ಅನಿತಾ ರವಿಶಂಕರ್

ಶಿವಮೊಗ್ಗ:ಜಿಲ್ಲೆ ಸೇರಿದಂತೆ ರಾಜ್ಯದ 11 ಮಹಾನಗರ ಪಾಲಿಕೆಗಳ ನೂತನ ಮೇಯರ್, ಉಪಮೇಯರ್ ಆಯ್ಕೆಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಈ ಬಾರಿ ಜಿಲ್ಲೆಯ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ.

ಮಹಾನಗರ ಪಾಲಿಕೆಗಳ ನೂತನ ಮೇಯರ್, ಉಪಮೇಯರ್ ಆಯ್ಕೆಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ.

ಮೇಯರ್ ಸ್ಥಾನ ಹಿಂದುಳಿದ ವರ್ಗ ಬಿ ಕೆಟಗರಿಯ ಮಹಿಳೆ ಮತ್ತು ಉಪಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ. ಜಿಲ್ಲಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಹೊಂದಿದೆ. ಈ ಮೀಸಲಾತಿ ಅನ್ವಯ, ಮೇಯರ್ ಸ್ಥಾನಕ್ಕೇರಲು ಇಬ್ಬರು ಅರ್ಹರಿದ್ದಾರೆ. ಪಾಲಿಕೆಯ 19ನೇ ವಾರ್ಡ್ ಶರಾವತಿ ನಗರದ ಸಾಮಾನ್ಯ ಮೀಸಲು ಕ್ಷೇತ್ರದ ಕಾರ್ಪೊರೇಟರ್ ಸುವರ್ಣಾ ಶಂಕರ್, 7ನೇ ವಾರ್ಡ್ ಕಲ್ಲಹಳ್ಳಿ ಕೆಹೆಚ್‌ಬಿಯಿಂದ ಬಿಸಿಎಂ (ಬಿ) ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅನಿತಾ ರವಿಶಂಕರ್ ಅವರಿಗೆ ಮೇಯರ್ ಪಟ್ಟ ಅಲಂಕರಿಸುವ ಅರ್ಹತೆ ಇದೆ.

ಮೂಲಗಳ ಪ್ರಕಾರ, ಮೇಯರ್ ಸ್ಥಾನಕ್ಕೆ ಅನಿತಾ ರವಿಶಂಕರ್ ಅವರ ಹೆಸರನ್ನು ಪರಿಗಣಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. 10ನೇ ವಾರ್ಡ್ನ ಆರತಿ ಎ.ಎಂ.ಪ್ರಕಾಶ್, 12ನೇ ವಾರ್ಡ್ನ ಸುರೇಖಾ ಮುರಳೀಧರ್, 23ನೇ ವಾರ್ಡ್ನ ಕಲ್ಪನಾ ರಮೇಶ್, 29ನೇ ವಾರ್ಡ್ನ ಸುನಿತಾ ಅಣ್ಣಪ್ಪ, 31ನೇ ವಾರ್ಡ್ನ ಲಕ್ಷ್ಮೀ ಶಂಕರನಾಯ್ಕ ಸಾಮಾನ್ಯ ಮೀಸಲಾತಿ ಅಡಿ ಗೆಲುವು ಸಾಧಿಸಿದ್ದಾರೆ.

ಇನ್ನು ಇವರಲ್ಲಿ ಯಾರು ಬೇಕಾದರೂ ಉಪ ಮೇಯರ್ ಆಗಬಹುದಾಗಿದೆ. ಆದರೆ ಉಪಮೇಯರ್ ಸ್ಥಾನಕ್ಕೆ ಸದ್ಯಕ್ಕೆ ಸುರೇಖಾ ಮುರಳೀಧರ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.

For All Latest Updates

TAGGED:

ABOUT THE AUTHOR

...view details