ಕರ್ನಾಟಕ

karnataka

ETV Bharat / state

‘ಇಂದಿರಾಗಾಂಧಿ  ಸರ್ವಾಧಿಕಾರಿ ಧೋರಣೆ ವಿರುದ್ಧದ ಪ್ರತಿಭಟನೆಯೇ 2ನೇ ಸ್ವಾತಂತ್ರ್ಯ ಹೋರಾಟ’ - ಬಿಜೆಪಿಯಿಂದ ಸನ್ಮಾನಿಸಲಾಯಿತು.

ಇಂದಿಗೆ ತುರ್ತು ಪರಿಸ್ಥಿತಿ ಜಾರಿಗೆ ಬಂದು 46 ವರ್ಷ ಆಗಿದೆ. ಇಂದಿರಾಗಾಂಧಿ ಅವರ ಸರ್ವಾಧಿಕಾರಿ ಧೋರಣೆ ವಿರುದ್ಧದ ಪ್ರತಿಭಟನೆಯೇ 2ನೇ ಸ್ವಾತಂತ್ರ್ಯ ಹೋರಾಟ ಎಂದು ಸಚಿವ ಕೆ‌.ಎಸ್ ಈಶ್ವರಪ್ಪ ಹೇಳಿದರು.

Minister KS Eshwarappa on emergency
ಸಚಿವ ಕೆ‌.ಎಸ್ ಈಶ್ವರಪ್ಪ ಹೇಳಿಕೆ

By

Published : Jun 26, 2021, 7:55 PM IST

ಶಿವಮೊಗ್ಗ: ಇಂದಿರಾಗಾಂಧಿ ಅವರ ಸರ್ವಾಧಿಕಾರಿ ಧೋರಣೆ ವಿರುದ್ಧದ ಪ್ರತಿಭಟನೆಯೇ 2ನೇ ಸ್ವಾತಂತ್ರ್ಯ ಹೋರಾಟ ಎಂದು ಸಚಿವ ಕೆ‌.ಎಸ್ ಈಶ್ವರಪ್ಪ ಹೇಳಿದರು.

ಸಚಿವ ಕೆ‌.ಎಸ್ ಈಶ್ವರಪ್ಪ ಹೇಳಿಕೆ

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ‘ತುರ್ತು ಪರಿಸ್ಥಿತಿಯ ಒಂದು ಕರಾಳ ನೆನಪು’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿಗೆ ತುರ್ತು ಪರಿಸ್ಥಿತಿ ಜಾರಿಗೆ ಬಂದು 46 ವರ್ಷ ಆಗಿದೆ. ಇಂತಹ ಕರಾಳ ದಿನದ ನೆನಪನ್ನು ಈಗಿನ ಪೀಳಿಗೆಯ ಯುವಜನಕ್ಕೆ ತಿಳಿಸುವ ಅವಶ್ಯಕತೆ ಇದೆ ಎಂದರು.

ಇಂದಿರಾಗಾಂಧಿ ಅವರ ಸರ್ವಾಧಿಕಾರಿ ಧೋರಣೆಯಿಂದಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸಿದರು. ತುರ್ತು ಪರಿಸ್ಥಿತಿ ವಿರೋಧಿಸಿ ಸಾವಿರಾರು ಜನ ಎರಡನೇ ಸ್ವಾತಂತ್ರ್ಯ ಹೋರಾಟದ ರೀತಿಯಲ್ಲಿ ಹೋರಾಟ ಮಾಡಿ ಜೈಲುವಾಸ ಅನುಭವಿಸಿದರು. ಅದರಲ್ಲಿ ನಾನು ಒಬ್ಬ ಎಂದು ತಿಳಿಸಿದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟ ಮಾಡಿ ಜೈಲುವಾಸ ಅನುಭವಿಸಿದ ಹೋರಾಟಗಾರರಿಗೆ ಜಿಲ್ಲಾ ಬಿಜೆಪಿಯಿಂದ ಸನ್ಮಾನಿಸಲಾಯಿತು.

ABOUT THE AUTHOR

...view details