ಕರ್ನಾಟಕ

karnataka

ETV Bharat / state

ಗೋವಾ ಚುನಾವಣೆ ಫಲಿತಾಂಶ ಈ ಬಾರಿ ಕಾಂಗ್ರೆಸ್​ ಪರವಾಗಲಿದೆ.. ಸತೀಶ್‌ ಜಾರಕಿಹೊಳಿ ವಿಶ್ವಾಸ - ಗೋವಾ ಚುನಾವಣೆ ಫಲಿತಾಂಶ ಈ ಬಾರಿ ಕಾಂಗ್ರೆಸ್​ ಪರವಾಗಲಿದೆ

ಹಿಜಾಬ್​ ವಿಚಾರದಲ್ಲಿ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಬಾರದು. ಸರ್ಕಾರ ಹಾಗೂ ಆಡಳಿತ ಮಂಡಳಿಗಳು ಕೂಡಲೇ ಮಧ್ಯಸ್ಥಿಕೆ ವಹಿಸಿ ಇಷ್ಟಕ್ಕೆ ಈ ಪ್ರಕರಣ ನಿಲ್ಲಿಸಬೇಕು..

Satish Jaraki, who visited the Shimoga District KPCC office
ಶಿವಮೊಗ್ಗ ಜಿಲ್ಲಾ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಸತೀಶ್​ ಜಾರಕಿ ಹೊಳಿ

By

Published : Feb 13, 2022, 6:57 PM IST

ಶಿವಮೊಗ್ಗ :ಗೋವಾ ಚುನಾವಣೆ ಫಲಿತಾಂಶ ನಮ್ಮ ಪರವಾಗಿದೆ. ಈ ಬಾರಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷಸತೀಶ್​ ಜಾರಕಿಹೊಳಿ ಅವರುಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿದ ಬಳಿಕ ಮಾತನಾಡಿರುವುದು..

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಗೋವಾದಲ್ಲಿ ನಮ್ಮ ತಪ್ಪಿನಿಂದ ನಾವು ಸರಕಾರ ಕಳೆದುಕೊಂಡಿದ್ದೇವೆ, ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನೂ ಕೇಸರಿ-ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈ ಘಟನೆ ರಾಜ್ಯದ ಕೆಲ ಕಡೆ ಮಾತ್ರ ನಡೆದಿದೆ. ವಿದ್ಯಾರ್ಥಿಗಳು ಸಹ ಈ ರೀತಿ ಮಾಡಿದರೆ ನಷ್ಟ ಆಗುವುದು ಅವರಿಗೆ.

ಹಾಗಾಗಿ, ಸರ್ಕಾರ ಹಾಗೂ ಆಡಳಿತ ಮಂಡಳಿಗಳು ಕೂಡಲೇ ಮಧ್ಯಸ್ಥಿಕೆವಹಿಸಿ ಇಷ್ಟಕ್ಕೆ ಈ ಪ್ರಕರಣ ನಿಲ್ಲಿಸಬೇಕು ಎಂದರು. ವಿದ್ಯಾರ್ಥಿಗಳು ನ್ಯಾಯಾಲಯದ ತೀರ್ಪನ್ನು ಅನುಸರಿಸುವುದು ಉತ್ತಮ ಎಂದರು.

ಪಂಚಾಯತ್​ ಚುನಾವಣೆಗಳು ವಿಳಂಬ : ತಾಲೂಕು, ಜಿಲ್ಲಾ ಪಂಚಾಯತ್‌ ಚುನಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ವಿಳಂಬ ಮಾಡುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯ ಪ್ರವೃತ ಆಗಿದೆ. ಹಾಗಾಗಿ, ಸಮಿತಿಗಳನ್ನು ರಚಿಸಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಓದಿ:ಸಂಸದ ಪ್ರತಾಪ್ ಸಿಂಹನಂತಹ ಮೂರ್ಖ ಯಾರಿಲ್ಲ: ಯು ಟಿ ಖಾದರ್ ಗರಂ

For All Latest Updates

TAGGED:

ABOUT THE AUTHOR

...view details