ಕರ್ನಾಟಕ

karnataka

ETV Bharat / state

ಶಿವಮೊಗ್ಗ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿದ ಪ್ರಧಾನಿ ಮೋದಿ - ಚುನಾವಣಾ ಪೂರ್ವ ಜನಸ್ಪಂದನೆ

ದಾವಣಗೆರೆ ಕಾರ್ಯಕ್ರಮ ಮುಗಿಸಿ ಶಿವಮೊಗ್ಗ ಏರ್​ಪೋರ್ಟ್​ಗೆ ಬಂದು, ಅಲ್ಲಿಂದ ವಾಯುಸೇನೆಯ ವಿಮಾನದಲ್ಲಿ ಪ್ರಧಾನಿ ಮೋದಿ ಅವರು ದೆಹಲಿಗೆ ವಾಪಸ್ ಆದರು.

Prime Minister Modi at Shimoga Airport.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ.

By

Published : Mar 25, 2023, 10:46 PM IST

ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಿವಮೊಗ್ಗ:ಇಂದು ರಾಜ್ಯ ಪ್ರವಾಸ ಕೈಗೊಂಡಿದ್ದ ಪ್ರಧಾನಿ‌ ನರೇಂದ್ರ‌ ಮೋದಿ ಅವರು ಸಾಯಂಕಾಲ ಶಿವಮೊಗ್ಗದಿಂದ ದೆಹಲಿಗೆ ವಾಪಸ್ ಆಗಿದ್ದಾರೆ. ಬೆಳಗ್ಗೆ ಬೆಂಗಳೂರಿನ ಕಾರ್ಯಕ್ರಮ ಮುಗಿಸಿ, ನಂತರ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಮಹಾಸಂಗಮ ಸಮಾರಂಭದಲ್ಲಿ ಭಾಗವಹಿಸಿದ್ದರು. ಮಹಾಸಂಗಮ ಕಾರ್ಯಕ್ರಮ ಮುಗಿಸಿದ ಬಳಿಕ ಅವರು ದಾವಣಗೆರೆಯಿಂದ ಮಿಲಿಟರಿ ವಿಭಾಗದ ಹೆಲಿಕ್ಯಾಪ್ಟರ್​​​ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ವಾಯುಸೇನೆಯ ವಿಮಾನದಲ್ಲಿ ದೆಹಲಿಗೆ ವಾಪಸ್ ಆದರು.

ಶಿವಮೊಗ್ಗದಲ್ಲಿ ಹೆಲಿಕ್ಯಾಪ್ಟರ್​​ನಿಂದ ಮೋದಿ ಇಳಿಯುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ವಾಗತಿಸಿದರು. ಅವರೊಂದಿಗೆ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ, ಡಿ.ಎಸ್.ಅರುಣ್, ಆಯನೂರು ಮಂಜುನಾಥ್ ಸೇರಿದಂತೆ ಬಿಜೆಪಿಯ ನಾಯಕರು ಹಾಜರಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ತೆರಳಿದ ನಂತರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಪ್ರಧಾನಿ‌ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಎರಡನೇ ಬಾರಿ ಬಂದಿದ್ದರು. ಮೋದಿ ಯಶಸ್ವಿಯಾಗಿ ಲ್ಯಾಂಡ್ ಆಗಿ ಟೇಕ್ ಆಪ್ ಆಗಿದ್ದಾರೆ. ಸದ್ಯದಲ್ಲಿ ಡೊಮೊಸ್ಟಿಕ್ ವಿಮಾನಗಳು ಇಲ್ಲಿ ಹಾರಾಟ ನಡೆಸಲಿವೆ ಎಂದು ಭರವಸೆ ನೀಡಿದರು.

ದಾವಣಗೆರೆಯಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಮಹಾಸಂಗಮ ಯಶಸ್ವಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು. ಅಪಾರ ಜನಸ್ತೋಮ ಸೇರಿತ್ತು. ಚುನಾವಣೆ ಪೂರ್ವ ಜನಸ್ಪಂದನೆ ಹೇಗಿದೆ ಅಂತ ದಾವಣಗೆರೆ ಕಾರ್ಯಕ್ರಮದಿಂದ ಗೂತ್ತಾಗಿದೆ. ಇದರಿಂದ ಬಿಜೆಪಿಗೆ ಹೊಸ ಹುರುಪು ಬಂದಂತೆ ಆಗಿದೆ. ನಾನು ಮೋದಿ ಅವರನ್ನು ಸ್ವಾಗತ ಮಾಡಿಕೊಳ್ಳಲು ಬೇಗನೇ ಶಿವಮೊಗ್ಗ ವಿಮಾನ ನಿಲ್ದಾಣಗೆ ಬಂದೆ. ಪಕ್ಷದ ಆಯ್ದ ಕಾರ್ಯಕರ್ತರು ಮೋದಿಜೀ ಅವರನ್ನು ಭೇಟಿಯಾದರು ಎಂದು ತಿಳಿಸಿದರು.

ವಿಜಯ ಸಂಕಲ್ಪ ಯಾತ್ರೆ ಸಮಾರೋಪ: ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವನ್ನು ಮರಳಿ ತರಲು ಕರ್ನಾಟಕ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದಾವಣಗೆರೆಯ ಜಿಎಂಐಟಿ ಕ್ಯಾಂಪಸ್ ಬಳಿಯಿರುವ ವಿಶಾಲ ಮೈದಾನದಲ್ಲಿ ಆಯೋಜಿಸಿರುವ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದ ಮಹಾಸಂಗಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿ ಮೆಗಾ ರೋಡ್ ಶೋ ನಡೆಸಿದರು. ಪ್ರಧಾನಿಯವರಿಗೆ ಭವ್ಯ ಸ್ವಾಗತ ಕೋರಲು ಅಪಾರ ಜನಸ್ತೋಮ ನೆರೆದಿರುವುದು ಕಂಡು ಬಂತು.

ಕನ್ನಡದಲ್ಲೇ ಪ್ರಧಾನಿ ಮೋದಿ ಮಾತು:ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲೇ ಮಾತುಗಳನ್ನು ಆರಂಭಿಸಿದರು. ದಾವಣಗೆರೆಯ ನನ್ನ ಸಹೋದರ, ಸಹೋದರಿಯರಿಗೆ ನಮಸ್ಕಾರಗಳು, ಕರ್ನಾಟಕದ ನನ್ನ ಬಿಜೆಪಿ ಕಾರ್ಯಕರ್ತರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಮೋದಿ ಮಾತನಾಡಿದರು. ರಾಜ್ಯ ಬಿಜೆಪಿಗೆ ಧನ್ಯವಾದ ಸಮರ್ಪಿಸಿದರು. ರಾಜ್ಯ ಬಿಜೆಪಿಯು ಕಾರ್ಯಕ್ರಮ ಆಯೋಜಿಸಿದ್ದರಿಂದ ನಾನು ನಿಮ್ಮನ್ನು ನೋಡಲು ಸಾಧ್ಯವಾಗಿದೆ. ನಿಮ್ಮೆಲ್ಲರ ದರ್ಶನ ನನಗೆ ಆಗಿರುವುದು ಸೌಭಾಗ್ಯ ಎಂದರು.

ಇದನ್ನೂ ಓದಿ:ದಾವಣಗೆರೆಯಲ್ಲಿ ಪ್ರಧಾನಿ ಮೋದಿ ರೋಡ್​ ಶೋ ವೇಳೆ ಭದ್ರತಾ ಲೋಪ

ABOUT THE AUTHOR

...view details