ಶಿವಮೊಗ್ಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಬಹಳ ಜನಕ್ಕೆ ಅನುಕೂಲವಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಸಾಕಷ್ಟು ಕೆಲಸ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ಕೆರೆ ಹೂಳು ತೆಗೆಯುವುದು ಪ್ರಮುಖ ಯೋಜನೆಯಾಗಿದೆ.
ಈ ಯೋಜನೆಯಡಿ ರೈತನ ಹೊಲದಲ್ಲಿ ಕೆಲಸ ಮಾಡಿಸಬಹುದು. ಆದರೆ ಜನ ಸಾಮೂಹಿಕ ಕೆಲಸಕ್ಕೆ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ವೈಯಕ್ತಿಕ ಕಾಮಗಾರಿಗೂ ಸಹ ಅವಕಾಶವಿದೆ. ಈ ಯೋಜನೆಯ ಬಗ್ಗೆ ಫಲಾನುಭವಿಗಳಾದ ಅಬ್ಬಲಗೆರೆ ಗ್ರಾಮಸ್ಥೆ ಮಾತನಾಡಿ, ಈ ಯೋಜನೆಯು ಕಟ್ಟ ಕಡೆಯ ವ್ಯಕ್ತಿಗೂ ಸಹ ಒತ್ತು ನೀಡುತ್ತದೆ. ಗ್ರಾಮಸ್ಥನಾಗಿದ್ದು, ಆಧಾರ್ ಕಾರ್ಡ್ ಇದ್ದರೆ, ಅವರಿಗೆ ಉದ್ಯೋಗ ಖಾತ್ರಿಯ ಜಾಬ್ ಕಾರ್ಡ್ ನೀಡಲಾಗುತ್ತದೆ. ಲಾಕ್ಡೌನ್ನಲ್ಲಿ ಇದು ಅನುಕೂಲಕರವಾಗಿದೆ ಎನ್ನುತ್ತಾರೆ.