ಶಿವಮೊಗ್ಗ: ಲಾಕ್‌ಡೌನ್ ಮೇ 3ರವರೆಗೂ ಮುಂದುವರೆಯಲಿದೆ. ಸಾರ್ವಜನಿಕರು ಸರ್ಕಾರದೊಂದಿಗೆ ಸಹಕಾರ ನೀಡಬೇಕು ಎಂದು ಸಚಿವ ಕೆ ಎಸ್ ಈಶ್ವರಪ್ಪ ಮನವಿ ಮಾಡಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಒಂದು ಪ್ರಕರಣ ಪತ್ತೆಯಾಗಿಲ್ಲ. ಇದಕ್ಕಾಗಿ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರು ಸಾಕಷ್ಟು ಶ್ರಮಿಸಿದ್ದಾರೆ. ಇದಕ್ಕೆ ಜನರು ಸಹ ಸಹಕಾರ ನೀಡುತ್ತಿದ್ದಾರೆ. ನಾನು ಪ್ರಾರ್ಥನೆ ಮಾಡುತ್ತೇನೆ, ಜನ ನಾನು ಅಲ್ಲಿಗೆ ಹೋಗಬೇಕು.. ಇಲ್ಲಿಗೆ ಹೋಗಬೇಕು ಅಂತಾ ಕೇಳೋದನ್ನು ಬಿಡಬೇಕು. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಒಳಿತಿಗೆ ಲಾಕ್‌ಡೌನ್‌ನ ಮುಂದುವರೆಸಿದ್ದಾರೆ ಎಂದರು.
ಲಾಕ್‌ಡೌನ್ ಮೇ 3ರವರೆಗೆ ಇರಲಿದೆ ಜನ ಸಹಕರಿಸಬೇಕು.. ಸಚಿವ ಕೆ ಎಸ್ ಈಶ್ವರಪ್ಪ
ಏಪ್ರಿಲ್ 20ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಶೀಲನೆ ನಡೆಸಲಿದ್ದಾರೆ. ಅಂದು ರಾಜ್ಯ ಹಾಗೂ ಜಿಲ್ಲೆಗಳ ಪರಿಸ್ಥಿತಿಯನ್ನು ನೋಡಿ ಮುಂದೆ ಏನು ಮಾಡುವುದು ಎಂದು ಪ್ರಧಾನಮಂತ್ರಿ ಹಾಗೂ ಸಿಎಂ ಅವರು ತಿಳಿಸಲಿದ್ದಾರೆ.
ಏಪ್ರಿಲ್ 20ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಶೀಲನೆ ನಡೆಸಲಿದ್ದಾರೆ. ಅಂದು ರಾಜ್ಯ ಹಾಗೂ ಜಿಲ್ಲೆಗಳ ಪರಿಸ್ಥಿತಿಯನ್ನು ನೋಡಿ ಮುಂದೆ ಏನು ಮಾಡುವುದು ಎಂದು ಪ್ರಧಾನಮಂತ್ರಿ ಹಾಗೂ ಸಿಎಂ ಅವರು ತಿಳಿಸಲಿದ್ದಾರೆ. ಸಿಎಂ ಅವರು ರಾಜ್ಯದ ಪರಿಸ್ಥಿತಿ ಹಾಗೂ ಸಡಿಲಿಕೆಯ ಕುರಿತು ಹೇಳಿಕೆ ನೀಡಲಿದ್ದಾರೆ. ಪ್ರತಿಯೊಬ್ಬರು ತನ್ನ ಮಗ, ಮಗಳು ಬೇರೆ ಊರಿನಲ್ಲಿ ಇದ್ದಾರೆ, ಪಿ ಜಿ ಸೇರಿದಂತೆ ಇತರೆ ಕಡೆ ಒಬ್ಬರೆ ಇದ್ದಾರೆ ಅಂತಾ ಗಾಬರಿಯಾಗುವುದು ಬೇಡ. ಎಲ್ಲಾ ಕಡೆ ಪೊಲೀಸರು ಸಹಕಾರದಿಂದ ರಕ್ಷಣೆ ಮಾಡುತ್ತಿದ್ದಾರೆ. ಅವರ ನೆರವಿಗೆ ಪೊಲೀಸರು ಇರಲಿದ್ದಾರೆ ಎಂದರು.
ಸಚಿವ ಸುಧಾಕರ್ ಪೋಸ್ಟ್ ಪ್ರತಿಕ್ರಿಯೆಗೆ ನಕಾರ :ವೈದ್ಯಕೀಯಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ತಮ್ಮ ಕುಟುಂಬದ ಜೊತೆ ಸ್ವಿಮ್ಮಿಂಗ್ ಮಾಡಿದ ಪೋಸ್ಟ್ ಕುರಿತು ಸಚಿವ ಈಶ್ವರಪ್ಪ ಪ್ರತಿಕ್ರಿಯಿಸಲಿಲ್ಲ. ಈ ಬಗ್ಗೆ ನನಗೆ ತಿಳಿದಿಲ್ಲ ಎಂದು ಜಾರಿಕೊಂಡರು.