ಶಿವಮೊಗ್ಗ: ಜಿಲ್ಲೆಯ ಸಂಗೋಳ್ಳಿ ರಾಯಣ್ಣ ರಸ್ತೆಯಲ್ಲಿ ಅಪ್ರಾಪ್ತೆಯನ್ನು ಅಪಹರಿಸಿದ ಪ್ರಕರಣವೊಂದು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 16 ವರ್ಷದ ಬಾಲಕಿಯನ್ನು ವಿರಾಟ್ ಅಲಿಯಾಸ್ ರಾಜು (26) ಎಂದು ಕರೆಯಲ್ಪಡುವ ವ್ಯಕ್ತಿಯು ಅಪಹರಣ ಮಾಡಿದ್ದಾನೆ ಎನ್ನಲಾಗ್ತಿದೆ.
ಅಪ್ರಾಪ್ತೆ ಅಪಹರಣ: ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ - ಅಪ್ರಾಪ್ತೆ ಅಪಹರಣ
16 ವರ್ಷದ ಬಾಲಕಿಯನ್ನು ವಿರಾಟ್ ಅಲಿಯಾಸ್ ರಾಜು ಎಂದು ಕರೆಯಲ್ಪಡುವ ವ್ಯಕ್ತಿಯು ಅಪಹರಣ ಮಾಡಿದ್ದಾನೆ ಎನ್ನಲಾಗ್ತಿದೆ. ಈ ಅಪ್ರಾಪ್ತೆಯ ಅಪಹರಣ ಮಾಡಿದವರ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.
ಆರೋಪಿ ವಿರಾಟ್ ಅಲಿಯಾಸ್ ರಾಜು
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಹುಡುಕಾಟ ನಡೆಸಿದ್ದರು. ಇದೀಗ ಬಾಲಕಿಯ ಸುಳಿವು ನೀಡಿದವರಿಗೆ, 50 ಸಾವಿರ ರೂ. ಬಹುಮಾನ ನೀಡುವುದಾಗಿ ಜಿಲ್ಲಾ ಮಹಿಳಾ ಪೊಲೀಸರು ಘೋಷಿಸಿದ್ದಾರೆ. ರಾಜು ಲಕ್ಷ್ಮಿ ನಾರಾಯಣ ಎಂಬುವರ ಮಗನಾಗಿರುವ ಆರೋಪಿ, ಬಾಲಕಿಯನ್ನು ಅಪಹರಿಸಿದ್ದಾನೆ ಎಂದು ಆಕೆಯ ತಂದೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಗಂಡೋರಿ ನಾಲಾ ಅಣೆಕಟ್ಟೆಯಲ್ಲಿ ನೀರಿನ ಒಳ ಹರಿವು ಹೆಚ್ಚಳ : ಹೆಚ್ಚುವರಿ ನೀರು ಬಿಡುಗಡೆ