ಕರ್ನಾಟಕ

karnataka

ETV Bharat / state

ವೇತನ ಬರೋವರೆಗೆ 25 ಕೆಜಿ ಅಕ್ಕಿ, 5 ಕೆಜಿ ಟೊಮೆಟೊ ಸೇರಿ ದಿನಸಿ ಸಾಮಗ್ರಿಗಳನ್ನು ನೀಡುವಂತೆ ಅತಿಥಿ ಉಪನ್ಯಾಸಕರ ಒತ್ತಾಯ.. - 25 ಕೆಜಿ ಅಕ್ಕಿ

ವೇತನ ಬರೋವರೆಗೆ 25 ಕೆಜಿ ಅಕ್ಕಿ, 5 ಕೆಜಿ ಟೊಮೆಟೊ ಸೇರಿ ದಿನಸಿ ಸಾಮಗ್ರಿಗಳನ್ನು ನೀಡುವಂತೆ ಒತ್ತಾಯಿಸಿ ಕೊಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಿಗೆ ಅತಿಥಿ ಉಪನ್ಯಾಸಕರ ಒತ್ತಾಯಿಸಿದ್ದಾರೆ.

guest lecturers
ಸಂಬಳ ಬರೋವರೆಗೆ 25 ಕೆಜಿ ಅಕ್ಕಿ, 5 ಕೆಜಿ ಟೊಮೆಟೊ ಸೇರಿ ದಿನಸಿ ಸಾಮಗ್ರಿಗಳನ್ನು ನೀಡಲು ಅತಿಥಿ ಉಪನ್ಯಾಸಕರ ಒತ್ತಾಯ..

By

Published : Aug 3, 2023, 8:11 PM IST

ಶಿವಮೊಗ್ಗ:ಕಳೆದ ಮೂರು ತಿಂಗಳನಿಂದ ವೇತನ ಬಾರದ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರು ಕುಟುಂಬ ನಿರ್ವಹಣೆಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ನೀಡಲು ಒತ್ತಾಯಿಸಿ ಕಾಲೇಜಿನ‌ ಪ್ರಾಚಾರ್ಯರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯ ಭದ್ರಾವತಿ ತಾಲೂಕು ಹೊಳೆಹೊನ್ನೂರಿನಲ್ಲಿರುವ ಕೊಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಿಗೆ ಅತಿಥಿ ಉಪನ್ಯಾಸಕರು ತಮ್ಮ ವಿವಿಧ ಬೇಡಿಕೆಗಳನ್ನು ಪಟ್ಟಿಯನ್ನು ಸಲ್ಲಿಕೆ ಮಾಡಿದರು.

ಈ ಕಾಲೇಜಿನಲ್ಲಿ 8ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಇದ್ದಾರೆ. ಇವರು ಗ್ರಾಮೀಣ ಪ್ರದೇಶದಲ್ಲಿ ಇರುವ ಉಪನ್ಯಾಸಕರು ಆಗಿದ್ದಾರೆ. ಇವರು ಅತಿಥಿ ಉಪನ್ಯಾಸದಿಂದ ಬರುವ ವೇತನದಿಂದಲೇ ಜೀವನ ನಡೆಸಬೇಕಿದೆ.

ದಿನಸಿ ಸಾಮಗ್ರಿಗಳನ್ನು ನೀಡಲು ಉಪನ್ಯಾಸಕರ ಮನವಿ:ಕಳೆದ ಮೂರು ತಿಂಗಳಿನಿಂದ ಸಂಬಳವಾಗದ ಹಿನ್ನೆಲೆಯಲ್ಲಿ ತಮ್ಮ ಕುಟುಂಬ ನಿರ್ವಹಣೆಗೆ ಬೇಕಾದ ಪ್ರತಿ ತಿಂಗಳ ದಿನಸಿ ವಸ್ತುಗಳನ್ನು ಪೂರೈಕೆ ಮಾಡುವಂತೆ ಕುರಿತು ವಿವಿಧ ಬೇಡಿಕೆಗಳು ಸೇರಿರುವ ಮನವಿಯನ್ನು ಸಲ್ಲಿಸಿದರು. ಅತಿಥಿ ಉಪನ್ಯಾಸರು ನೀಡಿರುವ ಮನವಿಯಲ್ಲಿ, ದಿನಸಿ ಸಾಮಗ್ರಿಯ ದೊಡ್ಡ ಪಟ್ಟಿಯೇ ಇದೆ. ಇದರಲ್ಲಿ 25 ಕೆಜಿ ಅಕ್ಕಿ, 5 ಕೆಜಿ ಟೊಮೆಟೊ, 10 ಕೆಜಿ ಈರುಳ್ಳಿ, 1 ಕೆಜಿ ಒಣ ಮೆಣಸು, 2 ಕೆಜಿ ಹಸಿ ಮೆಣಸು, 2 ಕೆಜಿ ತೂಗರಿ ಬೇಳೆ, 1/2 ಕೆಜಿ ಬೆಳ್ಳುಳ್ಳಿ, 1/4 ಕೆಜಿ ಶುಂಠಿ ಹಾಗೂ ಅಗತ್ಯ ಇರುವಷ್ಟು ಹಾಲು, ಮೊಸರು ಮತ್ತು ಒಂದು ಎಲ್ ಪಿ‌ ಜಿ ಸಿಲಿಂಡರ್ ಅನ್ನು‌ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಅತಿಥಿ ಉಪನ್ಯಾಸಕರಿಗೆ ಗೌರವಧನ ಬಿಡುಗಡೆಗೊಳಿಸಲು ರಾಜ್ಯ ಸರ್ಕಾರಕ್ಕೆ ಆಗ್ರಹ:ಅತಿಥಿ ಉಪನ್ಯಾಸಕರಿಗೆ ನೀಡುವ ಗೌರವಧನ ಕಳೆದ ಮೂರು ತಿಂಗಳಿಂದ ಬಿಡುಗಡೆ ಮಾಡಿಲ್ಲ. ಇದರಿಂದ ನಮ್ಮ ಜೀವನ ಹಾಗೂ ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗಿದೆ. ಅಲ್ಲದೇ ನಮ್ಮನ್ನು ನಂಬಿಕೊಂಡವರು ಉಪವಾಸದಿಂದ ಬದುಕಬೇಕಾದ ಪರಿಸ್ಥಿತಿ ಇದೆ. ಇದರಿಂದ ರಾಜ್ಯ ಸರ್ಕಾರವು ಕೂಡಲೇ ಅತಿಥಿ ಉಪನ್ಯಾಸಕರಿಗೆ ಗೌರವಧನ ಬಿಡುಗಡೆ ಮಾಡಬೇಕು. ನಮ್ಮ ಮಾಸಿಕ ವೇತನ ಬಾರದೇ ಇರುವುದರಿಂದ ಜೀವನ ನಿರ್ವಹಣೆಗೆ ಬೇಕಾದ ದಿನಸಿ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಿನಸಿ ಸಾಮಗ್ರಿಗಳನ್ನು ನೀಡಬೇಕು ಎಂದು ಅತಿಥಿ ಉಪನ್ಯಾಸಕರು ಸಹಿ ಹಾಕಿದ ಮನವಿ ಪತ್ರವನ್ನು ಪ್ರಾಂಶುಪಾಲರಿಗೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ಕೇಂದ್ರ ಭೂ ಸಾರಿಗೆ ಸಚಿವ ಗಡ್ಕರಿ ಭೇಟಿ.. ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ವೇ ಲೋಪದೋಷ ಚರ್ಚೆ

ABOUT THE AUTHOR

...view details