ಶಿವಮೊಗ್ಗ :ಸರ್ಕಾರರೈತರನ್ನುಕಾರ್ಮಿಕರನ್ನಾಗಿ ಮಾಡಲು ಹೊರಟಿದೆ ಎಂದು ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಎ ಡಿ ಶಿವಪ್ಪ ಆರೋಪಿಸಿದರು.
ಸರ್ಕಾರ ರೈತರನ್ನು ಕಾರ್ಮಿಕರನ್ನಾಗಿಸಲು ಹೊರಟಿದೆ.. ಬಿಎಸ್‌ಪಿ ಆಕ್ರೋಶ
ಅತಿವೃಷ್ಠಿ, ಅನಾವೃಷ್ಠಿ ಹಾಗೂ ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ರೈತರು ತಮ್ಮ ಭೂಮಿ ಮಾರಲು ಮುಂದಾಗುತ್ತಾರೆ. ಇದನ್ನೇ ದುರುಪಯೋಗ ಪಡೆದುಕೊಂಡು ಶ್ರೀಮಂತರು ರೈತರ ಭೂಮಿ ಕಬಳಿಸುತ್ತಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಭೂ ಸುಧಾರಣಾ ಕಾಯ್ದೆ ಜಾರಿಗೆ ತರುವ ಮೂಲಕ ರೈತರನ್ನು ಕಾರ್ಮಿಕರನ್ನಾಗಿ ಮಾಡಲು ಹೊರಟಿದೆ. ಅದರ ಜೊತೆಗೆ ಬಂಡವಾಳ ಶಾಹಿಗಳಿಗೆ ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಗೆ ರೈತರನ್ನು ಬಲಿಕೊಡಲು ಹೊರಟಿದೆ. ಹಾಗಾಗಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.
ಅತಿವೃಷ್ಠಿ, ಅನಾವೃಷ್ಠಿ ಹಾಗೂ ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ರೈತರು ತಮ್ಮ ಭೂಮಿ ಮಾರಲು ಮುಂದಾಗುತ್ತಾರೆ. ಇದನ್ನೇ ದುರುಪಯೋಗ ಪಡೆದುಕೊಂಡು ಶ್ರೀಮಂತರು ರೈತರ ಭೂಮಿ ಕಬಳಿಸುತ್ತಾರೆ. ಇದರಿಂದ ದೇಶಕ್ಕೆ ಅನ್ನ ನೀಡುವ ರೈತ ಕಾರ್ಮಿಕನಾಗಿ ದುಡಿಯುವ ಪರಿಸ್ಥಿತಿ ಎದುರಾಗುತ್ತದೆ. ಈ ಹಿನ್ನೆಲೆ ಸರ್ಕಾರ ಈ ತಿದ್ದುಪಡಿ ಜಾರಿಗೆ ತರಬಾರದು ಎಂದರು.