ಶಿವಮೊಗ್ಗ: ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಮನೆಯಲ್ಲಿ ನಿಗಾದಲ್ಲಿ ಇರುವವರ ಮೇಲೆ ಇನ್ನೂ ಹೆಚ್ಚಿನ ಗಮನ ಇಡಲು ಶಿವಮೊಗ್ಗ ಜಿಲ್ಲಾಧಿಕಾರಿ ಹೊಸದಾಗಿ ಯೋಜನೆ ಕೈಗೊಂಡಿದ್ದಾರೆ.
ನಿಗಾದಲ್ಲಿದ್ದವರ ಮೇಲೆ ಮತ್ತಷ್ಟು ನಿಗಾ... ಶಿವಮೊಗ್ಗ ಡಿಸಿ ಪ್ಲಾನ್ - ಕೊರೊನಾ ವಿರುದ್ಧ ಹೋರಾಟ
ನಿಗಾದಲ್ಲಿ ಇರುವವರ ಮನೆಯ ಮುಂದೆ ಪೋಸ್ಟರ್ ಅಂಟಿಸಲು ಜಿಲ್ಲಾಧಿಕಾರಿ ಶಿವಕುಮಾರ್ ಕ್ರಮ ಕೈಗೊಂಡಿದ್ದಾರೆ.
ಶಿವಮೊಗ್ಗ ಡಿಸಿ ಪ್ಲಾನ್
ನಿಗಾದಲ್ಲಿ ಇರುವವರ ಮನೆಯ ಮುಂದೆ ಪೋಸ್ಟರ್ ಅಂಟಿಸಲು ಜಿಲ್ಲಾಧಿಕಾರಿ ಶಿವಕುಮಾರ್ ಕ್ರಮ ಕೈಗೊಂಡಿದ್ದಾರೆ. ಹೀಗೆ ಪೋಸ್ಟರ್ ಅಂಟಿಸಿದ ಮನೆಗಳನ್ನು ದೂರದಿಂದಲೇ ನಿಗಾದಲ್ಲಿಡುವ ರೂರಲ್ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುತ್ತದೆ. ಕಂದಾಯ ಇಲಾಖೆ, ಪಂಚಾಯತ್ ರಾಜ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಟಾಸ್ಕ್ ಫೋರ್ಸ್ನಲ್ಲಿ ಇರಲಿದ್ದಾರೆ.
ಪೋಸ್ಟರ್ನಲ್ಲಿ ಏನಿದೆ?
- ಎಂದಿನಿಂದ ವ್ಯಕ್ತಿಗಳು ನಿಗಾದಲ್ಲಿದ್ದಾರೆ. ಎಷ್ಟು ದಿನ ನಿಗಾದಲ್ಲಿರಬೇಕು?
- ಮನೆಯಲ್ಲಿರುವ ಜನರ ಸಂಖ್ಯೆ ಎಷ್ಟು?
- ಈ ಮನೆಗೆ ಯಾರೂ ಬರಬಾರದು ಎಂಬ ಎಚ್ಚರಿಕೆಯೂ ಪೋಸ್ಟರ್ನಲ್ಲಿದೆ.