ಶಿವಮೊಗ್ಗ:ನಿಮ್ಮ ಮುಖದಲ್ಲಿ ನಗುವಿಲ್ಲ ಎಂದರೆ ಅವತ್ತು ಮನೆಯಿಂದ ಹೊರಗೆ ಹೋಗಲೇಬಾರದು ಎನ್ನುವ ಸ್ವಾಮಿ ವಿವೇಕಾನಂದರ ಮಾತನ್ನು ಹೇಳುವ ಮೂಲಕ ನಿಮ್ಮ ನಗು ಬೇರೊಬ್ಬರ ಮೊಗದಲ್ಲಿ ನಗು ತರಿಸುತ್ತದೆ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದ ಒಕ್ಕಲಿಗರ ಭವನದಲ್ಲಿ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಹಾಗೂ ಸಂಸ್ಕಾರ ಭಾರತಿ ಸಂಯುಕ್ತಾಶ್ರಯದಲ್ಲಿ ಭಾರತೀಯ ಸಂಸ್ಕೃತಿ ಹಿನ್ನೆಲೆ, ಪ್ರಸ್ತುತತೆ ಹಾಗೂ ಭವಿಷ್ಯದಲ್ಲಿ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಇಂದಿನ ತರುಣ ಪೀಳಿಗೆಯ ಪಾತ್ರ ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮ ತೊಂದರೆಯನ್ನಾಗಲಿ, ಬೇಸರವನ್ನಾಗಲಿ ಮತ್ತೊಬ್ಬರ ಮೇಲೆ ಹೇರುವ ಪ್ರಯತ್ನ ಮಾಡಬೇಡಿ, ನಿಮ್ಮ ಮುಖದಲ್ಲಿ ನಗು ಇಲ್ಲ ಅಂದರೆ ಅವತ್ತು ಕ್ಲಾಸಿಗೆ ಹೋಗಬೇಡಿ, ಏಕಂದರೆ, ನಿಮ್ಮ ನಗು ಇಲ್ಲದೇ ಇರುವ ಮುಖ ಮತ್ತೊಬ್ಬರ ಎರ್ನಜಿಯನ್ನು ಕಳೆದುಕೊಳ್ಳವಂತೆ ಮಾಡುತ್ತೆ ಎಂದರು. ವಿದ್ಯಾರ್ಥಿಗಳು ಸದಾ ಚೈತನ್ಯದಿಂದ, ಲವಲವಿಕೆ ಯಿಂದ ನಗು ಮುಖದಿಂದ ಕೂಡಿರಬೇಕೆಂದು ಸಲಹೆ ನೀಡಿದರು.