ಶಿವಮೊಗ್ಗ:ವರದಾನದಿಯ ಪ್ರವಾಹದಿಂದಾಗಿ ಸೊರಬ ತಾಲೂಕಿನ ಲಕ್ಕವಳ್ಳಿಯಲ್ಲಿರುವ ಶ್ರೀಮೋಕ್ಷ ಮಂದಿರ ಸಂಸ್ಥಾನ ಜೈನಮಠಕ್ಕೆ ಸಾಕಷ್ಟು ಹಾನಿಯಾಗಿದೆ. ಸರ್ಕಾರ ತಕ್ಷಣವೇ ಪರಿಹಾರ ನೀಡಬೇಕೆಂದು ವೃಷಭ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲಿ ಪ್ರವಾಹದ ಎಫೆಕ್ಟ್: ಲಕ್ಕವಳ್ಳಿಯ ಜೈನ ಮಠದ ಜೀರ್ಣೋದ್ಧಾರಕ್ಕೆ ಸ್ವಾಮೀಜಿ ಮನವಿ
ವರದಾ ನದಿಯ ಪ್ರವಾಹದಿಂದಾಗಿ ಸೊರಬ ತಾಲೂಕಿನ ಲಕ್ಕವಳ್ಳಿಯಲ್ಲಿರುವ ಶ್ರೀಮೋಕ್ಷ ಮಂದಿರ ಸಂಸ್ಥಾನ ಜೈನಮಠಕ್ಕೆ ಸಾಕಷ್ಟು ಹಾನಿಯಾಗಿದೆ. ಸರ್ಕಾರ ತಕ್ಷಣವೇ ಪರಿಹಾರ ನೀಡಬೇಕು ಎಂದು ವೃಷಭ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಆಗ್ರಹಿಸಿದ್ದಾರೆ.
ವೃಷಭ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಮಾತನಾಡಿದ್ದಾರೆ
ಈ ಕುರಿತು ಈಟಿವಿ ಬಾರತನೊಂದಿಗೆ ಮಾತನಾಡಿದ ಅವರು, ಲಕ್ಕವಳ್ಳಿಯಲ್ಲಿರುವ ಜೈನಮಠಕ್ಕೆ ಪ್ರವಾಹದಿಂದ ಸಂಪೂರ್ಣ ಹಾನಿಯಾಗಿದ್ದು, ಮಠ , ಅಲ್ಲಿನ ದೇವಸ್ಥಾನ, ಪ್ರೌಢಶಾಲಾ ವಸತಿ ನಿಲಯ ಕಟ್ಟಡಗಳಿಗೆ ನೀರು ನುಗ್ಗಿದೆ. ಅಲ್ಲದೇ ಸುಮಾರು 20 ಕಟ್ಟಡಗಳಿಗೂ ಹಾನಿಯಾಗಿದೆ. ಇದರಿಂದಾಗಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಸರ್ಕಾರ ತಕ್ಷಣವೇ ಮಠದ ಜೀರ್ಣೋದ್ಧಾರ ಮಾಡಿ ಮತ್ತು ವರದಾ ನದಿ ತಡೆಗೋಡೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.