ಶಿವಮೊಗ್ಗ:ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ ಮಂತ್ರಿ ಸ್ಥಾನದ ನೀಡುವ ಬಗ್ಗೆ ಶಿವಮೊಗ್ಗದಲ್ಲಿ ಸುದ್ದಿಗಾರೂಂದಿಗೆ ಮಾತನಾಡಿ, ನನಗೆ ಮಂತ್ರಿ ಮಾಡುವುದು ಮುಖ್ಯಮಂತ್ರಿಗಳು, ಅವರೇ ತಿರ್ಮಾನ ಮಾಡುತ್ತಾರೆ, ಅದು ನನ್ನ ತೀರ್ಮಾನವಲ್ಲ ಎಂದು ಖಡಕ್ ಆಗಿ ಹೇಳಿದರು.
ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ಸಲಹಾ ಸಮಿತಿಯವರು ಕರ್ನಾಟಕದವರ ಮೇಲೆ ಪ್ರಧಾನಿಗೆ ದೂರು ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಉತ್ತರಿಸಿ, ನಮ್ಮ ನಾಡು, ನುಡಿ, ವಿಚಾರದ ಬಗ್ಗೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಒಗ್ಗಟ್ಟಾಗಿರುತ್ತೇವೆ. ನಾವೆಲ್ಲರೂ ಈ ಬಗ್ಗೆ ಈಗಾಗಲೇ ತೀರ್ಮಾನ ತೆಗೆದುಕೊಂಡಿದ್ದೇವೆ. ಪ್ರಧಾನಿಗಲ್ಲ, ವಿಶ್ವ ಸಂಸ್ಥೆಗೆ ಹೋಗಿ ದೂರು ಕೊಡಲಿ ಎಂದರು.
ಈಗಾಗಲೇ, ಈ ಸಂಬಂಧ ವಿಧಾನಸಭೆಯಲ್ಲಿ ಸರ್ವಪಕ್ಷಗಳು ತೀರ್ಮಾನ ತೆಗೆದುಕೊಂಡಿದ್ದೆವೆ. ಈ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ, ಮಾಜಿ ಸಚಿವ ಜನಾರ್ದನ ರೆಡ್ಡಿ ಪಕ್ಷ ರಚನೆ ಮಾಡಿದ ಮೇಲೆ ಆ ಬಗ್ಗೆ ಮಾತನಾಡುತ್ತೇನೆ. ಈಗಲೇ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಅವರು ಪಕ್ಷ ರಚನೆ ಮಾಡುತ್ತಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಇನ್ನೂ ಮದುವೆಗೆ ಹೆಣ್ಣು ಗುರುತಾಗಿಲ್ಲ, ಈಗಲೇ ಈ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ.
ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೇನು ಗೊತ್ತಿಲ್ಲ. ಪದೇ ಪದೇ ಅದನ್ನೇ ಕೇಳಬೇಡಿ ಈಶ್ವರಪ್ಪ ಹೇಳಿದರು.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಸೌಂಡ್ ಕಿರಿ ಕಿರಿಗೆ ಬ್ರೇಕ್.. ಸೈಲೆನ್ಸರ್ಗಳ ಮೇಲೆ ರೋಡ್ ರೋಲರ್ ಸವಾರಿ