ಶಿವಮೊಗ್ಗ:ಅಡಕೆಗೆ ಬೆಳೆಗಾರರ ಪರವಾಗಿ ರಾಜ್ಯ ಸರ್ಕಾರವಿದ್ದು, ಅಡಕೆಗೆ ಎಲೆ ಚುಕ್ಕಿ ರೋಗ ತಡೆಯಲು ರಾಜ್ಯ ಸರ್ಕಾರ 10 ಕೋಟಿ ರೂ ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ತೀರ್ಥಹಳ್ಳಿಯ ಮುಳಬಾಗಿಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೈಮರ ಗ್ರಾಮದ ಹರೀಶ್ ಎಂಬುವರ ಎರಡು ಎಕರೆ ತೋಟವು ಎಲೆಚುಕ್ಕಿ ರೋಗದಿಂದ ಸಂಪೂರ್ಣ ನಾಶವಾಗಿದೆ. ಎಲೆಚುಕ್ಕಿರೋಗ ತಗಲಿದ ಅಡಕೆ ತೋಟಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜೊತೆ ಭೇಟಿ ನೀಡಿ ಸಿಎಂ ಪರಿಶೀಲಿಸಿದರು.
ಈ ಬಾರಿ ಬೇಸಿಗೆ ಕಾಲದಲ್ಲೂ ಮಳೆ ಬಂದಿದ್ದು ಎಲೆಚುಕ್ಕಿ ರೋಗ ಹೆಚ್ಚಾಗಲು ಕಾರಣವಾಗಿದೆ. ರೋಗದ ಬಗ್ಗೆ ತಜ್ಞರು ಹಾಗೂ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದಾರೆ. ಈ ರೋಗ ಒಂದು ತೋಟದಿಂದ ಇನ್ನೂಂದು ತೋಟಕ್ಕೆ ಗಾಳಿಯಿಂದ ಹರಡುತ್ತಿದೆ. 42 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆ ಇದೆ. ರೋಗ ಹರಡದಂತೆ ತಡೆಯಲು ಎಷ್ಟೇ ಖರ್ಚಾದರು ಸಹ ಸರ್ಕಾರವೇ ಭರಿಸಲಿದ್ದು ಅಡಕೆ ಬೆಳೆಗಾರರು, ರೈತರು ಹೆದರುವ ಅವಶ್ಯಕತೆ ಇಲ್ಲ, ನಿಮ್ಮ ಜೊತೆ ಸರ್ಕಾರವಿದೆ ಎಂದರು.
ಇದನ್ನೂ ಓದಿ:ಗುಲಾಬಿ ಬೆಳೆದು ಲಕ್ಷ ಲಕ್ಷ ಆದಾಯ.. ಬಡ ರೈತನ ಬದುಕು ಅರಳಿಸಿತು ರೋಸ್